ಇಂಡಿ

ಮಹರ್ಷಿ ಅರವಿಂದದವರ ವಿಚಾರಗಳು ಮಾನವ ವಿಕಾಸ ಪಥಕ್ಕೆ ಮಾರ್ಗದರ್ಶಿ: ಕೊಪ್ಪ

ಮಹರ್ಷಿ ಅರವಿಂದದವರ ವಿಚಾರಗಳು ಮಾನವ ವಿಕಾಸ ಪಥಕ್ಕೆ ಮಾರ್ಗದರ್ಶಿ: ಕೊಪ್ಪ

ಇಂಡಿ25: ಮಹರ್ಷಿ ಅರವಿಂದರು ಶಿಕ್ಷಣ ಕುರಿತು ಮಂಡಿಸಿದ ವಿಚಾರಗಳು ಮಾನವ ಕಲ್ಯಾಣ, ಮಾನವ ವಿಕಾಸ ಪಥಕ್ಕೆ ಮಾರ್ಗದರ್ಶಿ. ಶಿಕ್ಷಣ ಕುರಿತು ಮಂಡಿಸಿದ ವಿಚಾರಗಳು ವರ್ತಮಾನದ ಗ್ರಹಿಕೆಯಿಂದಲೂ ಪರಿಪುಷ್ಟವಾದುದು ಎಂದು ನಿವೃತ್ತ ಪ್ರಾದ್ಯಾಪಕ ಡಾ.ಎಸ್‌.ಕೆ. ಕೊಪ್ಪ ಹೇಳಿದರು. 

ಅವರು ಶನಿವಾರ ತಾಲೂಕಿನ ಚವಡಿಹಾಳ ಗ್ರಾಮದ  ಗುರು ಬಸವ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಅರಬಿಂದೋ ಘೋಷ ಇಂಡಿ ತಾಲೂಕಾ ಘಟಕದ ಸಹಯೋಗದಲ್ಲಿ ಅರವಿಂದ ರವರ 150 ನೇ ಜನ್ಮ ದಿನದ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.  

ಮಹರ್ಷಿ ಅರವಿಂದರ ಚಿಂತನೆಗಳ ಬೆಳಕಿನಲ್ಲಿ ಭಾರತೀಯ ಶಿಕ್ಷಣವನ್ನು ಕಟ್ಟಬೇಕಾಗಿದೆ ಎಂದರು. 

ಸಂಸ್ಥೆಯ ಅಧ್ಯಕ್ಷ ಎಂ.ಬಿ. ಬಿರಾದಾರ ಮಾತನಾಡಿ, ಗುಲಾಮಿ ದೇಶದಲ್ಲಿ, ಗುಲಾಮರನ್ನು ಆಳುವುದಕ್ಕಾಗಿ, ಗುಲಾಮರನ್ನು ತಯಾರಿಸುವ ಉದ್ದೇಶದ ಶಿಕ್ಷಣವಾಗಿದೆ. ಪ್ರಜ್ಞೆಯ ವಿಕಾಸವೇ ಅರವಿಂದರ ಶಿಕ್ಷಣ ಪರಿಭಾಷೆಯ ಕಾಳಜಿಯಾಗಿತ್ತು ಎಂದರು. ಅರವಿಂದರು ಶಿಕ್ಷಣವನ್ನು ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ನೆಲೆಯಲ್ಲಿ ನೀಡಿದಾಗ ಮಾತ್ರವೇ ಅದು ಪರಿಪೂರ್ಣವಾಗುತ್ತದೆ ಎಂದು ನಂಬಿದ್ದರು ಎಂದರು. 

ಶ್ರೀ ಮಾತೆಯವರ ಜೀವನ ಮತ್ತು ಸಾಧನೆ ಕುರಿತು  ನಿವೃತ್ತ ಪ್ರಾಚಾರ್ಯ ಎ.ಎಸ್‌. ಗಾಣಿಗೇರ, ಆಡಳಿತಾಧಿಕಾರಿ ಎ.ಎಸ್‌. ಪಾಟೀಲ, ಕೆ.ಜಿ. ತಳೇವಾಡ, ಬಿ.ಎಸ್‌. ಖ್ಯಾದಿ, ಎಸ್‌.ಎಂ. ಬಿರಾದಾರ ಮಾತನಾಡಿದರು.    

ಐ.ಬಿ.ಸುರಪುರ,  ಎಂ.ಜೆ. ಪಾಟೀಲ ಮತ್ತಿತರರು ವೇದಿಕೆಯ ಮೇಲಿದ್ದರು. 

ಸುದ್ದಿ ಓದಿ