ಇಂಡಿ

ಸಂಸದ ಜಿಗಜಿಣಗಿ ಅವರು ರೈತರ ಬದುಕನ್ನು ಹಸನಾಗಿಸಿದ್ದಾರೆ: ಕಾಪಸೆ

ಸಂಸದ ಜಿಗಜಿಣಗಿ ಅವರು ರೈತರ ಬದುಕನ್ನು ಹಸನಾಗಿಸಿದ್ದಾರೆ:  ಕಾಪಸೆ

ಇಂಡಿ: ಅಖಂಡ ವಿಜಯಪುರ ಜಿಲ್ಲೆ ಇದ್ದ ಸಂದರ್ಭದಲ್ಲಿ ಪಂಚ ನದಿಗಳು ಹರೆದರೂ ಜಿಲ್ಲೆಗೆ ಬರಗಾಲ ತಪ್ಪಿರಲಿಲ್ಲ. ಸಂಸದ ಜಿಗಜಿಣಗಿ ಅವರು ಜಿಲ್ಲೆಯ ರೈತರಿಗೆ ಅನುವು ಮಾಡಲು ಗಂಗಾ ಕಲ್ಯಾಣ ಯೋಜನೆಯನ್ನು ರೂಪಿಸುವ ಮೂಲಕ ರೈತರ ಬದುಕನ್ನು ಹಸನಾಗಿಸಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಕಾಪಸೆ ಹೇಳಿದರು. 

ಭಾನುವಾರ ಝಳಕಿ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗಂಗಾ ಕಲ್ಯಾಣ ಯೋಜನೆ ಮುಖಾಂತರ ಸರಕಾರದಿಂದಲೇ ಕೊಳವೆ ಭಾವಿಗಳನ್ನು ಕೊರೆಯಿಸಿ, ಇಂಡಿ ತಾಲೂಕಿನ ಬರವನ್ನು ಅಳಿಸಿ ಹಸಿರು ತಾಲೂಕಾಗಿ ಪರಿವರ್ತನೆ ಮಾಡುವಲ್ಲಿ ಸಂಸದ ರಮೇಶ ಜಿಗಜಿಣಗಿ ಅವರ ಪಾತ್ರ ಹಿರಿದಾಗಿದೆ. 

ಈಗ ಜಾಲಮುಕ್ತ ಸೌರಪಂಪ್‌ಸೆಟ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ “ಕುಸುಮ್‌” ಮಹಾಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸಂಸದ ಜಿಗಜಿಣಗಿ ಅವರ ಪರಿಶ್ರಮವೇ ಕಾರಣವಾಗಿದೆ. ನಮ್ಮ ರಾಜ್ಯ ಸರಕಾರ 307 ಕೋಟಿ ರೂ ಬಿಡುಗಡೆ ಮಾಡಲಿದ್ದು ಉಳಿದ ಹಣವನ್ನು ಕೇಂ ದ್ರ ಸರಕಾರ ಭರಿಸಲಿದೆ. ಈ ಯೋಜನೆಯಿಂದ ರಾಜ್ಯದ ಹತ್ತು ಸಾವಿರ ರೈತರಿಗೆ ಅನುಕೂಲವಾಗಲಿದೆ. ಯೋಜನೆಯನ್ನು ರೈತರು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೆಕು ಎಂದು ರಾಘವೇಂದ್ರ ತಿಳಿಸಿದರು. 

ಸುದ್ದಿ ಓದಿ