ಇಂಡಿ

ಇಬ್ರಾಹಿಂ ಸುತಾರ ನಿಧನಕ್ಕೆ ಶಾಸಕ ಯಶವಂತ್ರಾಯಗೌಡ ಸಂತಾಪ

ಇಬ್ರಾಹಿಂ ಸುತಾರ ನಿಧನಕ್ಕೆ ಶಾಸಕ ಯಶವಂತ್ರಾಯಗೌಡ ಸಂತಾಪ

ಇಂಡಿ05: ಸರ್ವಧರ್ಮ ಸಮನ್ವಯತೆ ಹಾಗೂ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಸಂತ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಇಬ್ರಾಹಿಂ ಸುತಾರ ಇವರ ನಿಧನದ ಸುದ್ಧಿ ದಿಗ್ಭ್ರಮೆ ಮೂಡಿಸಿದೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಸಂತಾಪ ಸೂಚಿಸಿದ್ದಾರೆ. 

ಇತ್ತೀಚೆಗೆ ಇಂಡಿ ಪಟ್ಟಣದಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು ಉಭಯಕುಶಲೋಪರಿ ವಿಚಾರಣೆ ಹಾಗೂ ಅವರ ಹೀತ ನುಡಿ ಕೇಳುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ ಅವರ ನಿಧನದಿಂದ ಇಡೀ ದೇಶ, ರಾಜ್ಯದ ಜನತೆ ಶೋಕ ಸಾಗರದಲ್ಲಿ ಮುಳುಗಿದೆ ಮತ್ತು ಭಾವೈಕ್ಯ ಹರಿಕಾರ ಕಳೆದುಕೊಂಡು ನಾವೆಲ್ಲ ಶೋಕ ಸಾಗರದಲ್ಲಿ ಮುಳುಗಿದ್ದೇವೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡುವುದರ ಜೋತೆಗೆ ಅವರ ಕುಟುಂಬಕ್ಕೆ ದುಃಖ ತಡೆದುಕೋಳ್ಳುವ ಶಕ್ತಿ ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ವಿ ಪಾಟೀಲ ರವರು ತಿಳಿಸಿದ್ದಾರೆ. 

ಸುದ್ದಿ ಓದಿ