ಇಂಡಿ

ಗ್ರಂಥಾಲಯಗಳು ಜ್ಞಾನ ದೇಗುಲ: ವಗದಾಳ

ಗ್ರಂಥಾಲಯಗಳು ಜ್ಞಾನ ದೇಗುಲ: ವಗದಾಳ

ಇಂಡಿ: ಗ್ರಂಥಾಲಯಗಳು ಜ್ಞಾನ ದೇಗುಲಗಳು. ವಿದ್ಯಾರ್ಥಿಗಳು ಅದರ ಲಾಭ ಪಡೆದುಕೊಳ್ಳಬೇಕೆಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ತಿಪ್ಪಣ್ಣ ಎಸ್ ವಗದಾಳ ಹೇಳಿದರು. 

ಶುಕ್ರವಾರ ಪಟ್ಟಣದ ಜಿ.ಆರ್‌.ಗಾಂಧಿ ಕಲಾ, ವಾಯ್‌.ಎ.ಪಾಟೀಲ ವಾಣಿಜ್ಯ ಹಾಗೂ ಎಮ್‌.ಎಫ್‌.ಧೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದ ವತಿಯಿಂದ ಡಾ ಎಸ್‌.ಆರ್‌. ರಂಗನಾಥನ್ ರವರ 130ನೇ ಜನ್ಮದಿನಾಚರಣೆಯ ಪ್ರಯಕ್ತ ರಾಷ್ಟ್ರೀಯ ಗ್ರಂಥಪಾಲಕರ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಡಾ ಎಸ್‌.ಆರ್‌. ರಂಗನಾಥನ್ ರವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳಲು ಹಗಲಿರುಳು ಶ್ರೇಮಿಸಿದರು. ಇವರ ಬದುಕು ಅದರ್ಶಮಯವಾದದು, ಅಲ್ಲದೆ ದೇಶ- ವಿದೇಶಗಳನ್ನು ಸುತ್ತಾಡಿ ಗ್ರಂಥಾಲಯಗಳ ಬಗೆಗೆ ಆಳವಾದ ಜ್ಞಾನ ಸಂಪಾದಿಸಿದ್ದರು. ಆ ಕಾರಣಕ್ಕಾಗಿ ಅವರ ಹಾಕಿಕೊಟ್ಟ ಮಾರ್ಗಗಳು ವಿಶ್ವ ವಿಖ್ಯಾತಿ ಪಡೆದಿವೆ ಎಂದರು  

ಮಹಾವಿದ್ಯಾಲಯದ ಗ್ರಂಥಪಾಲಕ ರಾಘವೇಂದ್ರ ಪಿ.ಇಂಗನಾಳ ರವರು ಮಾತನಾಡಿ  ಮೂಲಭೂತ ಅವಶ್ಯಕತೆಗಳಾದ ಆಹಾರ, ನೀರು, ಬಟ್ಟೆ, ಜೊತೆಗೆ ಜ್ಞಾನವು ಕೂಡಾ ಒಂದಾಗಿದೆ. ಜ್ಞಾನವನ್ನು ಸಂಪಾದಿಸುವಲ್ಲಿ ಗ್ರಂಥಾಲಯಗಳ ಪಾತ್ರ ಬಹಳ ಮುಖ್ಯ ಎಂದರು. ಪ್ರಾಚಾರ್ಯ ಎಸ್‌.ಬಿ. ಜಾಧವ ,ಡಾ.ಜಯಪ್ರಸಾದ.ಡಿ. ಡಾ ಸಿ.ಎಸ್ ಬಿರಾದಾರ ಮಾತನಾಡಿದರು.  

ಪ್ರಾಧ್ಯಾಪಕರುಗಳಾದ ಡಾ. ವಿಶ್ವಾಸ. ಎ. ಕೊರವಾರ, ಡಾ.ಪಿ.ಕೆ. ರಾಠೋಡ, ಡಾ .ಸುರೇಂದ್ರ.ಕೆ., ಎಮ್‌.ಆರ್‌.ಕೋಣದೆ,  ಎಸ್‌.ಎ.ದರ್ಗಾ,  ನವೀನ ಬಿರಾದಾರ,  ಬಲರಾಮ ವಡ್ಡರ ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಮತ್ತಿತರಿದ್ದರು.  

ಸುದ್ದಿ ಓದಿ