ಸಂಚಾರ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ: ಹಟ್ಟಿ
ಲೋಕದರ್ಶನ ವರದಿ
ಯರಗಟ್ಟಿ 25: ಯರಗಟ್ಟಿ ಪಟ್ಟಣವು ವೇಗವಾಗಿ ಬೆಳೆಯುತ್ತಿದೆ ನಾಲ್ಕು ಹೆದ್ದಾರಿಗಳನ್ನು ಹೊಂದಿರುವುದರಿಂದ ವ್ಯಾಪಾರ ವಹಿವಾಟು ಜೋರಾಗಿದ್ದು ದ್ವಿಚಕ್ರ ವಾಹನ ಸವಾರರು ರಸ್ತೆ ಮದ್ಯದಲ್ಲಿಯೇ ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡುತ್ತಿರುವದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ವಾಹನ ಸವಾರರು ನಿಮ್ಮ ಸುರಕ್ಷತೆಗಾಗಿ ಲೈಸನ್ಸ್, ವಿಮಾ ಇರಲೇಬೇಕು ಸಂಚಾರ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿವಾಯ್ಎಸ್ಪಿ ರಾಮನಗೌಡ ಹಟ್ಟಿ ಹೇಳಿದರು.
ಸಾರ್ವಜನಿಕರ ಸುರಕ್ಷತೆ, ಕಳ್ಳತನ ತಡೆಗಟ್ಟುವುದು ಹಾಗೂ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಕರ್ನಾಟಕ ಪಬ್ಲಿಕ್ ಸೆಪ್ಟಿ ಯಾಕ್ಟ್ ಅಡಿಯಲ್ಲಿ ಸಿಸಿಟಿವಿ ಅಳವಡಿಕೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಭಕ್ತರು ಆಗಮಿಸುವುದರಿಂದ ವಾಹನಗಳ ಸಂಚಾರ ದಟ್ಟಣೆಯಾಗುತ್ತದೆ ಸವಾರರು ನಿಲುಗಡೆಗೆ ಸೂಚಿಸಿದ ಸ್ಥಳಗಳಲ್ಲಿಯೇ ವಾಹನ ನಿಲುಗಡೆ ಮಾಡಬೇಕು ಎಂದರು.
ಪಟ್ಟಣದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ನಡೆಯುವ ಮಂಗಳವಾರ ತರಕಾರಿ ಸಂತೆಯನ್ನು ಎಪಿಎಮ್ಸಿ ಆವರಣಕ್ಕೆ ಸ್ಥಳಾಂತರಿಸುವ ಬಗ್ಗೆ ತಿರ್ಮಾನಿಸಲಾಯಿತು.
ಸಿಪಿಐ ಮೌನೇಶ್ವರ ಮಾಲಿಪಾಟೀಲ, ಪಿಎಸ್ಐ ಪ್ರವೀಣ ಗಂಗೋಳ, ಪಂ.ಪಂ.ಮುಖ್ಯಾಧಿಕಾರಿ ಎಸ್.ಎಸ್.ಗೋರೋಶಿ, ಎಎಸ್ಐ ಎಫ್.ವಾಯ್.ಮಲ್ಲೂರ, ಅಶೋಕ ಜಕಾತಿ, ಬಿ.ಕೆ.ಪತ್ತಾರ, ಡಿ.ಕೆ.ರಫೀಕ್, ಹುಸೇನಸಾಬ ಸನದಿ, ರಫೀಕ್ ಜಮಾದಾರ, ಫಕೀರ್ಪ ಖಿಲಾರಿ, ಬಾಬು ಚನ್ನಮೇತ್ರಿ ಮುಂತಾದವರಿದ್ದರು.