ಜಾನುವಾರಗಳ ಕಾಲು-ಬಾಯಿ ಲಸಿಕೆ ಅಭಿಯಾನಕ್ಕೆ ಚಾಲನೆ
ಇಂಡಿ: ತಾಲೂಕಿನಾದ್ಯಂತ ನ.7 ರಿಂದ ಒಂದು ತಿಂಗಳ ಕಾಲ ಜಾನುವಾರಗಳ ಕಾಲು-ಬಾಯಿ ಲಸಿಕೆ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಈ ಸಂಬಂಧ ಪಶು ಪಾಲನೆ ಇಲಾಖೆಯ ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಮುಖ್ಯ ಪಶುವೈದ್ಯಾಧಿಕಾರಿ ಸಂಚಾರಿ ಆರ್.ಎಸ್. ಅಡಿಕೆ ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 61302 ಜಾನುವಾರುಗಳಿಗೆ ಉಚಿತವಾಗಿ ರಾಷ್ಟ್ರೀಯ ರೋಗ ನಿವಾರಣೆಯಡಿ ಕಾಲುಬಾಯಿ ರೋಗದ ಲಸಿಕೆ ನೀಡಲಾಗುತ್ತಿದೆ. ಇದರಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವದು ತಪ್ಪಲಿದೆ ಎಂದರು.
ತಂಡಗಳ ರಚನೆ : ಲಸಕೀಕರಣ ಸಮರ್ಪಕ ಅನುಷ್ಠಾನ ಸಂಬಂಧ ಪಶುಪಾಲನೆ ಇಲಾಖೆ ಅಧಿಕಾರಿಗಳು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ತಾಲೂಕಿನಲ್ಲಿ ರಾಸುಗಳಿಗೆ ಲಸಿಕೆ ನೀಡಲು 10 ಮೇಲ್ವಿಚಾರಕರು, 41 ಲಸಿಕೆದಾರರು, 1051 ಬ್ಲಾಕುಗಳಿರುತ್ತವೆ. ಒಟ್ಟು 20 ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿ ತಂಡದಲ್ಲಿ ಇಬ್ಬರು ನುರಿತ ಸಿಬ್ಬಂದಿ, ಒಬ್ಬರು ವೈದ್ಯರು, 2 ಲಸಿಕೆ ನೀಡುವವರು ಇದ್ದಾರೆ. ಈ ತಂಡದಲ್ಲಿನ ಸದಸ್ಯರು ವಿವಿಧ ಗ್ರಾಮಗಳಲ್ಲಿ ಕಾರ್ಯನಿರ್ವಹಿಸಲಿದೆ. ರೈತರ ಹೊಲಗಳಿಗೆ ತೆರಳಿ ಉಚಿತವಾಗಿ ರೈತರ ರಾಸುಗಳಿಗೆ ಲಸಿಕೆ ನೀಡಲಿದ್ದಾರೆ.
ಕಾಲು ಬಾಯಿ ರೋಗವನ್ನು ಪ್ರಾಣಿಜನ್ಯ ಮಾನವ ರೋಗ ಎಂದು ಪರಿಗಣಿಸಲಾಗಿದೆ. ಬ್ರುಸೆಲ್ಲಾ ಎಂಬ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾದಿಂದ ಈ ರೋಗವು ಹಸು, ಎಮ್ಮೆ, ಆಡು, ಕುರಿ, ನಾಯಿ ಮತ್ತು ಕುದರೆಮುಂತಾದ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಾಲು ಬಾಯಿ ರೋಗದಿಂದ ಜಾನುವಾರುಗಳಲ್ಲಿ ಗರ್ಭಪಾತ, ಅನಾರೋಗ್ಯ, ಹಾಲು ಉತ್ಪಾದನೆಯಲ್ಲಿ ಕುಸಿತ, ಬಂಜೆತನ ಉಂಟಾಗಲಿದೆ. ದೋಷಿತ ಅಹಾರ ಮತ್ತು ನೀರು ಸೇವಿಸುವದರಿಂದ ಹಾಗೂ ಕಣ್ಣು ಮತ್ತು ಚರ್ಮದ ಮುಖಾಂತರ ಕೃತಕ ಗರ್ಭಧಾರಣೆಯಲ್ಲಿ ಸೋಂಕಿತ ವಿರ್ಯಗಳ ಉಪಯೋಗದಿಂದ ಈ ಕಾಲು ಬಾಯಿ ರೋಗ ಉಂಟಾಗಲಿದೆ.