ವಿವಿಧ ಗ್ರಾಮಗಳಿಂದ ಬಂದ ಕರಬಲ್ ಪ್ರದರ್ಶನ
ಇಂಡಿ 04: ಭಾವೈಕ್ಯದ ಹಿಂದು-ಮುಸ್ಲಿಂ ಬಾಂಧವರು ಆಚರಿಸುವ ಇಂಡಿಯ ಮೊಹರಂ ಆಟವಿ ಖತಾಲ ರವಿವಾರ ಜರುಗಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರ ರಾತ್ರಿ 7 ಗಂಟೆಗೆ ಪಟ್ಟಣ ಮತ್ತು ವಿವಿಧ ಗ್ರಾಮಗಳಿಂದ ಬಂದ ಕರಬಲ್ ಪ್ರದರ್ಶನ ನಡೆಯುವದು.
ಶನಿವಾರ ಸಂಜೆ 4 ರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಝೂಲ್ ಫಕೀರ ಮೆರವಣೆಗೆ ನಂತರ ರವಿವಾರ ಇಂಡಿಯ ಪ್ರಸಿದ್ಧ ಆಟವಿ ಖತಾಲ ಜರಗುವದು.
ಸೋಮವಾರ ಬೆಳಗಿನ 5 ಗಂಟೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಂಜೆಯ ಮೆರವಣೆಗೆ ನಡೆಯುವದು.
ಝೂಲ್ ಫಕೀರ, ಕರಬಲ್, ಕರಡಿ ನೃತ್ಯ ಸೇರಿದಂತೆ ಅನೇಕ ಮೆರವಣೆಗೆಯಲ್ಲಿ ಪಾಲ್ಗೊಳ್ಳುವರು.
ಜಾತ್ರಾ ಸಮಿತಿಯ ಶಂಕರಗೌಡ ಪಾಟೀಲ, ಬಲುಗೌಡ ಪಾಟೀಲ, ತುಕಾರಾಮ ವಾಲಿಕಾರ, ರಫೀಕ ಮಕಾನದಾರ, ಇಸಾಕ ಮಕಾನದಾರ, ಹುಮಾಯೂನ ಮಕಾನದಾರ, ಆದಿಲ್ ಮಕಾನದಾರ, ಮಹಿಬೂಬ ಮಕಾನದಾರ, ಕಮರಲಿ ಮಕಾನದಾರ, ಕಾಶಿಮಷಾ ಇಸ್ಮಾಲಷಾ ಮಕಾನದಾರ ತಿಳಿಸಿದ್ದಾರೆ.