ಕೀರ್ತನೆಗಳ ಮೂಲಕ ಮನುಕುಲದ ಪ್ರತಿಪಾದಕ ಕನಕದಾಸರು: ಗಡದೆ
ಇಂಡಿ: ಭಾರತೀಯ ಸಮಾಜದಲ್ಲಿ ಶತ ಶತಮಾನಗಳಿಂದ ನೆಲೆಯೂರಿದ್ದ ಅಸಮಾನತೆಯ ನಡೆಯನ್ನು ಪ್ರಶ್ನಿಸುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಕುಲ ಕುಲ ಎಂದು ಜಗಳಾಡದಿರಿ ಎಂದು ತಮ್ಮ ಕೀರ್ತನೆಗಳ ಮೂಲಕ ಸಮಾನತೆ ಸಾರಿದ ಮನುಕುಲದ ಪ್ರತಿಪಾದಕ ಕನಕದಾಸರು ಎಂದು ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು.
ಶುಕ್ರವಾರ ಪಟ್ಟಣದ ತಾಲೂಕಾ ಆಡಳಿತ ಸೌಧದ ಸಭಾಭವನದಲ್ಲಿ ತಾಲೂಕಾಡಳಿತ ವತಿಯಿಂದ ಆಯೋಜಿಸಿದ ದಾಸ ಶ್ರೇಷ್ಠ ಕನಕದಾಸರ ಹಾಗೂ ಒನಕೆ ಓಬ್ಬವ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.
ಹಾಲುಮತ ಸಮಾಜದ ಮುಖಂಡ ಜಟ್ಟೆಪ್ಪ ರವಳಿ ಮಾತನಾಡಿ, ಜಾತಿ ಭೇದದಿಂದ ಜಡ್ಡುಗಟ್ಟಿದ ಸಮಾಜವನ್ನು ತಿದ್ದುವ ಕೆಲಸವನ್ನು ಕನಕದಾಸರು ಕೀರ್ತನೆಗಳ ಮೂಲಕ ಮಾಡಿದ್ದಾರೆ ಎಂದರು.
ತಹಸೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿ, ಓನಕ್ಕೆ ಓಬವ್ವ ದಿಟ್ಟ ಮಹಿಳೆ. ದುರ್ಗದ ಕೋಟೆ ರಕ್ಷಿಸಿ ವೈರಿ ಪಡೆ ನಾಶಮಾಡುವಲ್ಲಿ ಆಕೆಯ ಧೈರ್ಯ ಸಾಹಸ ಯುವಕರಿಗೆ ಮಾದರಿ ಎಂದರು.
ಸಮಾರಂಭದಲ್ಲಿ ಆರ್.ಎಸ್. ರುದ್ರವಾಡಿ, ಸಿಪಿಐ ಭೀಮನಗೌಡ ಬಿರಾದಾರ, ತಾ.ಪಂ ವ್ಯವಸ್ಥಾಪಕ ಎಂ.ವ್ಹಿ. ನಾರಾಯಣಪೂರ, ಆರ್.ವಿ. ಪಾಟೀಲ, ಜಾವೀದ ಮೋಮಿನ, ಪ್ರಶಾಂತ ಕಾಳೆ, ಭೀಮಣ್ಣಾ ಕೌಲಗಿ, ಯಲ್ಲಪ್ಪ ಹದರಿ, ಶ್ರೀಶೈಲ ಪೂಜಾರಿ, ಬುದ್ದುಗೌಡ ಪಾಟೀಲ, ಸಂತೋಷ ಹೊಟಗಾರ, ಹರಿಶ್ಚಂದ್ರ ಪವಾರ, ಮತ್ತಿತರರು ಇದ್ದರು.