ಜೆಡಿಎಸ್ ಸಂಘಟನಾ ಪೂರ್ವಭಾವಿ ಸಭೆ
ಇಂಡಿ06: ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು. ಕಾರ್ಯಕರ್ತರು ಪ್ರತೀ ಗ್ರಾಮಗಳಲ್ಲಿ ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಮನವಿ ಮಾಡಿದರು.
ಶನಿವಾರ ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳವಾಗಿದ್ದು ನಿಮ್ಮ ಶ್ರಮವೇ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಕಾರ್ಯಕರ್ತರು ತಮ್ಮಹಿಮನೆ ಮಠ ಬಿಟ್ಟು ಶ್ರಮವಹಿಸಿದ್ದೀರಿ ಕೆಲವೇ ಸಾವಿರ ಮತಗಳ ಅಂತರದಲ್ಲಿ ನಾನು ಪರಾಭವಗೊಂಡಿದ್ದೇನೆ. ನಾನು ಪರಾಭವಗೊಂಡ ದಿನದಿಂದ ಇಲ್ಲಿಯವರೆಗೂ ವಿರಮಿಸದೆ ಪ್ರತೀ ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ನಾನೊಬ್ಬ ಬಡವ ನನ್ನ ಹತ್ತಿರ ದುಡ್ಡು ಇಲ್ಲ ಆದರೆ ಮಾನವೀಯತೆ ಇದೆ. ನಾನು ಶಾಸಕನಾದರೆ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಜನರ ಸೇವೆ ಮಾಡಲು ಈ ಬಾರಿ ನನಗೆ ಅವಕಾಶ ಮಾಡಿಕೊಡಿ. ಕಳೆದ ಬಾರಿ ಚುನಾವಣೆಯಲ್ಲಿ ಎಲ್ಲರನ್ನೂ ಮುಟ್ಟಲು ಸಾಧ್ಯವಾಗಲಿಲ್ಲ. ಈ ಬಾರಿ ಪ್ರತೀ ಮನೆ-ಮನೆಗೂ ಭೇಟಿ ನೀಡಿದ್ದೇನೆ ಕ್ಷೇತ್ರದ ಅಭಿವೃದ್ಧಿಗೆ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಎಮ್.ವಿ. ಕಾಂಬಳೆ, ಮಾಜೀದ್ ಸೌದಾಗರ್, ಅಯೂಬ ನಾಟೀಕಾರ, ಶ್ರೀಶೈಲಗೌಡ ಪಾಟೀಲ, ಶರಣು ಡಂಗಿ, ಮಲ್ಲಿಕಾರ್ಜುನ ಸಾಹುಕಾರ ಮಾತನಾಡಿದರು.
ಸಿದ್ದಪ್ಪ ಗುನ್ನಾಪೂರ, ಜಯರಾಮ್ ಪವಾರ, ಸಿದ್ದು ಡಂಗಾ, ಮೈಬೂಬ ಬೇವನೂರ, ಗಂಗಾರಾಮ್ ಪವಾರ್, ಭೀಮ ಕೋಳಿ, ಪೀರ್ಪ ಹೊಟಗಾರ, ಸೂರ್ಯಕಾಂತ ಹಿರೇಕುರುಬರ, ಶ್ರೀಶೈಲ ಪಾಯಕರ್, ಲವಕುಶ ಹೂಗಾರ, ಅಣ್ಣಾರಾಯ ಬಿರಾದಾರ, ವಿಠ್ಠಲ ಹಳ್ಳಿ, ಶಿವಾ ಟೆಂಗಳೆ, ದತ್ತು ಸೂರ್ಯವಂಶಿ, ಡಿ.ಕೆ. ಪೂಜಾರಿ, ಗಡೇಪ್ಪ ಮೇತ್ರಿ, ಡಾ. ರಮೇಶ ರಾಠೋಡ, ದುಂದು ಬಿರಾದಾರ, ರಾಜು ಮುಲ್ಲಾ, ಶರಣಗೌಡ ಪಾಟೀಲ, ಸಿದ್ದಣಗೌಡ ಬಿರಾದಾರ, ಅರವಿಂದ ಮೈದರಗಿ, ಹೂವಣ್ಣ ಪೂಜಾರಿ ಲಕ್ಷ್ಮಣ ಗುಂಡಕರಜಗಿ, ಶ್ರೀಶೈಲ ವಾಲೀಕಾರ, ಇಸಾಕ್ ಸೌದಾಗರ್, ಅರವಿಂದ ಮೈದರಗಿ, ಪರಶುರಾಮ ಹಿರೇಕುರುಬರ, ಬೀರ್ಪ ಸಗಾಯಿ ಸೇರಿದಂತೆ ಇನ್ನಿತರರು ಇದ್ದರು.