ಅಕ್ರಮವಾಗಿ ಅಕ್ಕಿ ಸಾಗಾಟ: ಅಧಿಕಾರಿಗಳಿಂದ 550 ಕೆಜಿ ಅಕ್ಕಿ ವಶ
ಇಂಡಿ: ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಆಹಾರ ನೀರೀಕ್ಷಕ ಪರಮಾನಂದ ಹೂಗಾರ ಹಾಗೂ ಸಿಬ್ಬಂದಿ ದಾಳಿಗೈದು 1550 ಕೆ.ಜಿ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಶನಿವಾರ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.
ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಶ್ರೀಧರ ಇಂಡಿ ಎಂದು ಗುರುತಿಸಲಾಗಿದೆ. ಸರಕಾರದಿಂದ ನಾಗರಿಕರಿಗೆ ಪೂರೈಕೆಯಾಗುವ 34 ಸಾವಿರ ರೂ ಬೆಲೆ ಬಾಳುವ 1550 ಕೆಜಿ ಅಕ್ಕಿಯನ್ನು ಆಹಾರ ನೀರಿಕ್ಷಕ ಪರಮಾನಂದ ಹೂಗಾರ ಜಪ್ತಿ ಮಾಡಿದ್ದಾರೆ.
ಬೆಳಗ್ಗೆ 7 ಗಂಟೆಗೆ ತಡವಲಗಾ ಗ್ರಾಮದ ಸಮೀಪ ಅಣ್ಣಪ್ಪ ಗುರಪ್ಪಾ ಇಂಡಿ ಇವರ ತೋಟದ ಮನೆಯ ಹತ್ತಿರ ತಡವಲಗಾದಿಂದ ಹಿರೇಇಂಡಿಗೆ ಹೋಗುವ ರಸ್ತೆಯ ಬದಿ ಒಂದು ಟಾಟಾ ಎ.ಎಸ್.ನಲ್ಲಿ ಕೆ.ಎ. 28 ಬಿ 3360 ಸಾಗುತ್ತಿದ್ದ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರೀಶೀಲನೆ ನಡೆಸಿ ಆರೋಪಿ ಅಕ್ಕಿ ಹಾಗೂ ವಾಹನ ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಹೊರ್ತಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.