ಬೈಲಹೊಂಗಲ

24ರಿಂದ ಬೃಹತ್ ಜಾನುವಾರು ಜಾತ್ರೆ, ಪ್ರದರ್ಶನ

24ರಿಂದ ಬೃಹತ್ ಜಾನುವಾರು ಜಾತ್ರೆ, ಪ್ರದರ್ಶನ

ಲೋಕದರ್ಶನ ವರದಿ 


ಬೈಲಹೊಂಗಲ 09 ನ. 22 ರಂದು ನಡೆಯಲಿರುವ ಪಟ್ಟಣದ ಐತಿಹಾಸಿಕ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ  ಜಾನುವಾರ ಪ್ರದರ್ಶನ ಕಮಿಟಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಹಯೊಗದೊಂದಿಗೆ ದಿ. 24, 25, 26 ರಂದು ಬೃಹತ್ ಜಾನುವಾರು ಜಾತ್ರೆ ಪ್ರದರ್ಶನವನ್ನು  ಪಟ್ಟಣದ ಎಪಿಎಂಸಿ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಕಮೀಟಿ ಮುಖಂಡ ಶಿವರಂಜನ ಬೋಳಣ್ಣವರ ಹೇಳಿದರು.  

           ಅವರು ಸೋಮವಾರ ಪಟ್ಟಣದ ವಿವೇಕಾನಂದ ಅರ್ಬನ್ ಕೋ - ಆಪ್ ಕ್ರೆಡಿಟ್ ಸೊಸೈಟಿ ಲಿ. ಇದರ ಕಾರ್ಯಾಲಯದಲ್ಲಿ ಜರುಗಿದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಬಾರಿ ರೈತರ ಸಹಕಾರ ದಿಂದ ಜಾನುವಾರ ಪ್ರದರ್ಶನ ಅಚ್ಚು ಕಟ್ಟಾಗಿ ನಡೆದಿತ್ತು, 2019 ನೇ ಸಾಲಿನಲ್ಲಿ ವಿಶ್ವದ್ಯಾಂತ ಮಾಹಾಮಾರಿ ಕರೋನಾ ಸೊಂಕಿನಿಂದ ಲಕ್ಷಾಂತರ ಜನತೆ ಸಾವು ಸಂಭವಿಸಿ, ಸಂರ​‍್ೂಣ ಜನಜೀವನ ಅಸ್ತವ್ಯಸ್ತ ಗೊಂಡು ಪರಿಣಾಮ ಜಾತ್ರೆ, ಮದುವೆ, ಸಭೆ ಸಮಾರಂಭಗಳಿಗೆ ಸರ್ಕಾರ ಯಾವುದೇ ಅನುಮತಿ ನೀಡಿರಲಿಲ್ಲ ಎಂದರು.  

             ಭಗವಂತನ ಕೃಪೆಯಿಂದ ಕರೋನಾ ಸೊಂಕು ಕಡಿಮೆಯಾಗಿದ್ದು, ಈ ಭಾರಿ ಮರಡಿ ಬಸವೇಶ್ವರ ಜಾತ್ರೆ, ಜಾನುವಾರ ಜಾತ್ರೆ  ಅದ್ದೂರಿಯಾಗಿ ನಡೆಯಲಿದೆ. ಜಾನುವಾರು ಜಾತ್ರೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ದೇಶಿಯ ಜಾನುವಾರಗಳನ್ನು ತಂದು ಯಶಸ್ವಿಗೊಳಿಸಬೇಕೆಂದರು. 

            ಎಪಿಎಂಸಿ ಕಾರ್ಯದರ್ಶಿ ಎಸ್‌.ಎಸ್‌.ಅರಳಿಕಟ್ಟಿ, ಸಹ ಕಾರ್ಯದರ್ಶಿ ಸುನೀಲ ಗೋಡಬೊಲೆ ಮಾತನಾಡಿ, ಗಂಡು ಮೆಟ್ಟಿನ ವೀರರ ನಾಡಿನಲ್ಲಿ ಐತಿಹಾಸಿಕ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರೆ ನೂರಾರು ವರ್ಷಗಳಿಂದ ಭಕ್ತರು ಅದ್ದೂರಿಯಾಗಿ ಆಚರಣೆ ಮಾಡುತ್ತ ಬಂದಿದ್ದು ಉತ್ಸವ ನಿಮಿತ್ಯ ಜಾನುವಾರ ಪ್ರದರ್ಶನವನ್ನು 36 ಎಕರೆ ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ  ನಡೆಯಲಿದ್ದು ಇದಕ್ಕೆ ಸಂರ​‍್ೂಣ ಸಹಾಯ ಸಹಕಾರ ನೀಡುವದಾಗಿ ಭರವಸೆ ನೀಡಿದರು. 

      ಮುಖಂಡರಾದ ಮಡಿವಾಳಪ್ಪ ಹೋಟಿ, ಮಹಾಂತೇಶ ತುರಮರಿ, ಮುರಗೆಪ್ಪ ಗುಂಡ್ಲೂರ, ವಿರುಪಾಕ್ಷ ಕೊರಿಮಠ, ಅಶೋಕ ಮತ್ತಿಕೊಪ್ಪ, ಸುಭಾಸ ತುರಮರಿ, ಮಹಾಂತೇಶ ಮತ್ತಿಕೊಪ್ಪ, ಆನಂದ ಮೂಗಿ, ನಂದು ಹರಕುಣಿ, ವಿಠ್ಠಲ ದಾಸೊಗ, ಮಹಾಂತೇಶ ಗುಂಡ್ಲೂರ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ ಇದ್ದರು. 


ಸುದ್ದಿ ಓದಿ