ಭಾರಿ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
ಇಂಡಿ 20: ರೈತರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ನಮ್ಮ ನಿತ್ಯದ ಊಟದ ಹಿಂದೆ ರೈತನ ಶ್ರಮವಿದೆ. ಇಡೀ ಜಗತ್ತು ಬೆಳಗುವ ರೈತ ಯಾವಾಗಲೂ ತೆರೆಮರೆಯಲ್ಲೆ? ಇರುತ್ತಾನೆ. ಆತನ ಸಂಕಟ, ನೋವು, ದುಮ್ಮಾನಗಳಿಗೆ ಎಣೆಯೇ ಇಲ್ಲ. ಆದರೂ, ನೇಗಿಲು ಹೊತ್ತ ಯೋಗಿ ತನ್ನ ಕಾಯಕ ಮಾಡುತ್ತಲೇ ಇರುತ್ತಾನೆ. ಅದರಂತೆ ಇಂಡಿ ತಾಲ್ಲೂಕಿನಾದ್ಯಂತ ನಿನ್ನೆ ಸೋಮುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗೆ ಈಡಾಗಿವೆ.
ಇಂಡಿ ತಾಲೂಕಿನ ಪಡನೂರ, ಲಚ್ಯಾಣ, ಬರಗುಡಿ, ನಾದ, ಹೀರೆಬೆನೂರ, ಅಗರಖೇಡ, ಸೇರಿದಂತೆ ಎಲ್ಲೆಡೆ ಸುರಿದ ಭಾರಿ ಮಳೆಯಿಂದ ರೈತರ ಬೆಳೆಗಳಾದ ತೊಗರಿ, ಹತ್ತಿ, ಉದ್ದು, ಹೆಸರು, ಸಜ್ಜೆ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳು ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ ರೈತರು.
ಈ ಕುರಿತು ಇಂಡಿ ಕೃಷಿ ಸಹಾಯಕ ನಿರ್ದೇಶಕ ಮಾದೇವಪ್ಪ ಏವೂರ ಅವರನ್ನು ಕೇಳಿದಾಗ ಸೋಮವಾರ ರಾತ್ರಿ ಇಂಡಿ ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿದೆ. ಇಂಡಿ ನಗರದಲ್ಲಿ 20 ಮಿ.ಮೀ.ನಾದ 65 ಮಿ.ಮೀ. ಅಗರಖೇಡ 91.02 ಮಿ ಮೀ. ಝಳಕಿ 29 ಮಿ.ಮೀ.ಹಲಸಂಗಿ 64.ಮಿ.ಮೀ.ಲಚ್ಯಾಣ 78 ಮಿ.ಮೀ. ಸೇರಿದಂತೆ ತಾಲೂಕಿನಾದ್ಯಂತ ಉತ್ತಮ ಮಳೆ ಆಗಿದೆ. ಬೆಳೆಗಳು ಕೂಡಾ ಹಾನಿ ಆಗಿವೆ ಎಂದು ತಿಳಿದು ಬಂದಿದೆ. ಇವತ್ತು ನಾನು ಖುದ್ದಾಗಿ ಬೆಳೆ ಹಾನಿಗೊಳಗಾದ ರೈತರ ಹೊಲಗಳಿಗೆ ಹೋಗಿ ಪರೀಶೀಲನೆ ಮಾಡುವುದಾಗಿ ಹೇಳಿದರು.