ಗ್ರಾಪಂ ಜನಪ್ರತಿನಿಧಿಗಳು ಜನಸೇವೆಗಾಗಿ ಶ್ರಮಿಸುತ್ತಿದ್ದಾರೆ: ಶಾಸಕ ಪಾಟೀಲ
ಇಂಡಿ27: ತೆನ್ನಿಹಳ್ಳಿ ಗ್ರಾಮ ಪಂಚಾಯತ್ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ನಾಡಿಮಿಡಿತವನ್ನು ಅರಿತುಕೊಂಡು ಜನಸೇವೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಯಶವಂತರಾಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ತಾಲೂಕಿನ ತೆನ್ನಿಹಳ್ಳಿ ಗ್ರಾಮದಲ್ಲಿ 2021-22ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೀಜನೆಯಡಿಯಲ್ಲಿ ಅಂದಾಜು ರೂ 50ಲಕ್ಷ ನಿರ್ಮಿಸಿದ ನೂತನ ಗ್ರಾಮ ಪಂಚಾಯತ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಚುನಾವಣೆ ಬಂದಾಗ ಮಾತ್ರ ಪಕ್ಷ, ಪಂಗಡ ಎನ್ನಬೇಕು. ಉಳಿದೆಲ್ಲ ದಿನಗಳಲ್ಲಿ ಜನರ ಏಳಿಗೆಗೋಸ್ಕರ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೆಲಸ ಮಾಡಬೇಕು. ನಾವೆಲ್ಲರೂ ಜನರ ಸೇವಕರು ಅನ್ನೋದನ್ನು ಅರಿತುಕೊಳ್ಳಬೇಕು ಸಂದರ್ಭ ಬಂದಾಗ ಮಾನವೀಯತೆ ದೃಷ್ಟಿಯಿಂದ ನಾವೆಲ್ಲ ಒಂದಾಗಿ ಕೆಲಸ ಮಾಡಬೇಕು. ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರಿ ಮಾತನಾಡಿ, ಸರ್ಕಾರ ಸಾಕಷ್ಟು ಅಭಿವೃದ್ದಿಪರ ಕೆಲಸಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ. ಅದಕ್ಕೆ ಪ್ರತಿಯೊಂದು ಸಮಾಜದವರು ಯಾವುದೇ ಕೆಲಸ ಕಾರ್ಯಗಳಿದ್ದರೆ ನಿರ್ಭಿತಿಯಿಂದ ನನ್ನ ಬಳಿ ಬಂದು ಕೆಲಸ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಜನಪ್ರತಿನಿಧಿಗಳಾದ ನಾವು ನಿಮ್ಮ ಸೇವೆಗಾಗಿ ಸಿದ್ದರಿದ್ದೇವೆ. ಗ್ರಾಮ ಪಂಚಾಯತ್ ಸದಸ್ಯರ ವಿವಿದ ಬೇಡಿಕೆಗಳನ್ನು ನಾನ್ನು ಪ್ರಾಮಾಣಿಕವಾಗಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಗೊರನಾಳ ಗ್ರಾಮದ ವಿರೂಪಾಕ್ಷ ದೇವರು, ಜಿ.ಪಂ ಮುಖ್ಯ ಕಾರ್ಯದರ್ಶಿ ರಾಹುಲ ಶಿಂಧೆ, ತಾ.ಪಂ ಸಿಇಓ ಸುನೀಲ ಮುದ್ದಿನ, ದ್ರಾಕ್ಷಾಯಣ್ಣಿ ಹಟ್ಟಿ, ಸಂಜಯ ಖಡಗೇಕರ, ಚಿದಾನಂದ ಮಿಂಚನಾಳ, ಎಂ.ಆರ್. ಅಲಿಯಾಬಾದ, ಸಂಜೀವ ಬಿರಾದಾರ, ಸುನೀಲ ರಾಠೋಡ, ಸುಮಂಗಲಾ ಜಿಡ್ಡಿಮನಿ, ಬಸವರಾಜ ಬಬಲಾದ, ಶರಣಪ್ಪ ಗಂಗನಳ್ಳಿ, ಇಜಾಜ್ ಜಹಾಗೀರದಾರ, ದ್ಯಾವಪ್ಪ ಪೂಜಾರಿ, ಪುಷ್ಪಾ ನಾಟೀಕಾರ, ಮಾಸೂಮಾ ಜಾತಗಾರ, ರಾಧಾ ನಾಮದಾರ, ಕಾಶಿಬಾಯಿ ವಾಲಿಕಾರ, ಚಂದಪ್ಪ ಸಾಗನೂರ, ಚಿದಾನಂದ ಗಂಗನಳ್ಳಿ, ಸವಿತಾ ಕುಂಬಾರ, ರಮೇಶ ಮಂಗಳೂರ, ಮಹಮ್ಮದ ಖುರೇಶಿ ಉಪಸ್ಥಿತರಿದ್ದರು.