ಮಹಿಳಾ ಘಟಕದ ಅಧ್ಯಕ್ಷೆಯಾಗಿ ಫಿರ್ದೋಷ್ ಸುನೇವಾಲೆ ನೇಮಕ
ಇಂಡಿ 27: ಜೆಡಿಎಸ್ ನಗರ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಫಿರ್ದೋಷ್ ಸುನೇವಾಲೆ ಅವರನ್ನು ನೇಮಕ ಮಾಡಿ ತಾಲೂಕ ಅಧ್ಯಕ್ಷ ಬಿ.ಡಿ. ಪಾಟೀಲ ಇತ್ತೀಚೆಗೆ ಆದೇಶ ನೀಡಿದರು.
ಜೆಡಿಎಸ್ ಪಕ್ಷ ಬೇರು ಮಟ್ಟದಿಂದ ಸಂಘಟಿಸಿ, ಪಕ್ಷವನ್ನು 2023ಕ್ಕೆ ಅಧಿಕಾರಕ್ಕೆ ತರಲು ಶ್ರಮಿಸಬೇಕು. ಬಡವರು, ಅಲ್ಪಸಂಖ್ಯಾತರು, ಕಾರ್ಮಿಕರ ಕುಂದು-ಕೊರತೆಗಳ ಪರಿಹಾರಕ್ಕಾಗಿ ಸರಕಾರದ ವಿರುದ್ಧ ಸಂಘಟಿತ ಹೋರಾಟ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.
ಜೆಡಿಎಸ್ ಮುಖಂಡರಾದ ಅಯೂಬ ನಾಟೀಕಾರ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ರಾಜಶೇಖರ ಜಮಾದಾರ, ದುಂಡು ಬಿರಾದಾರ, ಬಾಳು ರಾಠೋಡ ಸೇರಿದಂತೆ ಅನೇಕ ಜೆಡಿಎಸ್ ಕಾರ್ಯಕರ್ತರು ಇದ್ದರು.