ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸತ್ಕಾರ
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಬೈಲಹೊಂಗಲ ಸತತ ಮೂರನೇ ಬಾರಿ ಜಿಲ್ಲೆಗೆ ಪ್ರಥಮ
ಬೈಲಹೊಂಗಲ 23: ಬೈಲಹೊಂಗಲ ತಾಲೂಕು ರಾಜ್ಯ ಮಟ್ಟದಲ್ಲಿ ರಾ್ಯಂಕ ಪಡೆದ ಹಾಗೂ ಸತತ 3ನೇ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸತ್ಕರಿಸಲಾಯಿತು.
ಬಿಇಒ ಎ.ಎನ್. ಪ್ಯಾಟಿ, ಶಿಕ್ಷಣ ಸಂಯೋಜಕ ಪ್ರಕಾಶ ಮಾಸ್ತಿಹೋಳಿ ಮಾತನಾಡಿ, ತಾಲೂಕಿನ 68 ಶಾಲೆಗಳಲ್ಲಿ 63 ಶಾಲೆಗಳ ಎ ಗ್ರೇಡ್, 5 ಶಾಲೆಗಳ ಫಲಿತಾಂಶ ಬಿ ಗ್ರೇಡ್ ಆಗಿದ್ದು, ಶೇ. 94.39 ವಿದ್ಯಾರ್ಥಿಗಳು ತೆರ್ಗಡೆ ಹೊಂದಿದ್ದು, 10 ಸರಕಾರಿ, 4 ಅನುದಾನಿತ, 11 ಖಾಸಗಿ ಶಾಲೆಗಳ ಫಲಿತಾಂಶ ನೂರರಷ್ಟಾಗಿದೆ. ಪರೀಕ್ಷೆಗೆ 4,155 ವಿದ್ಯಾರ್ಥಿಗಳು ಹಾಜರಾಗಿದ್ದು, 3,922 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು 624 ರಾಜ್ಯಕ್ಕೆ ದ್ವೀತೀಯ ರಾ್ಯಂಕ, ಆರು ವಿದ್ಯಾರ್ಥಿಗಳು 623 ರಾಜ್ಯಕ್ಕೆ ತೃತೀಯ ರಾ್ಯಂಕ, ಮೂವರು 622 ನಾಲ್ಕನೆಯ, ಒರ್ವ 621 ಅಂಕ ಪಡೆದು ಐದನೆಯ ರಾ್ಯಂಕ ಪಡೆದು ಕೀರ್ತಿ ತಂದಿದ್ದಾರೆ ಎಂದರು.
ಫಲಿತಾಂಶದ ಯಶಸ್ಸಿಗೆ ಶ್ರಮಿಸಿದ ಬಿಇಒ ಎ.ಎನ್. ಪ್ಯಾಟಿ, ಸಮನ್ವಯಾಧಿಕಾರಿ ಬಿ.ಎನ್. ಕಸಾಳೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ಮೆಳವಂತೆ, ದೈಹಿಕ ಶಿಕ್ಷಣಾಧಿಕಾರಿ ಎಸ್.ಜಿ. ಹೊರಟ್ಟಿ, ಶಿಕ್ಷಣ ಸಂಯೋಜಕ ಪ್ರಕಾಶ ಮಾಸ್ತಿಹೋಳಿ, ಮಹೇಶ ಯರಗಟ್ಟಿ ಅವರನ್ನು ಸತ್ಕರಿಸಲಾಯಿತು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ. ನಂದಣ್ಣವರ, ತಾಲೂಕಾಧ್ಯಕ್ಷ ಎಸ್.ವಿ.ಯರಡ್ಡಿ, ಬಿ.ಟಿ.ಗುರಕ್ಕನವರ, ಆರ್.ಎನ್. ಕೊಳ್ಳಿ, ಹುಡೇದ, ಎಂ.ಸಿ.ಬಿರಾದಾರ, ಡಿ.ಬಿ.ನಾಯ್ಕರ, ಯು.ವಿ.ಸುಬೇದಾರ, ಎಸ್.ಗಣಾಚಾರಿ, ವಿಠಲ ಬಡ್ಡಿಮನಿ ಇತರರು ಇದ್ದರು.