ಬೈಲಹೊಂಗಲ

ವೆಚ್ಚದಲ್ಲಿ ಹೆಚ್ಚು ಇಳುವರಿ ತೆಗೆದಾಗ ಕೃಷಿ ಲಾಭದಾಯಕ ; ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅಭಿಮತ : ಮುರಗೋಡ ಹೋಬಳಿಯ ಅನ್ನದಾತರ ಸಂಘದ ಉದ್ಘಾಟನೆ

ವೆಚ್ಚದಲ್ಲಿ ಹೆಚ್ಚು ಇಳುವರಿ ತೆಗೆದಾಗ ಕೃಷಿ ಲಾಭದಾಯಕ ; ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅಭಿಮತ : ಮುರಗೋಡ ಹೋಬಳಿಯ ಅನ್ನದಾತರ ಸಂಘದ ಉದ್ಘಾಟನೆ

ಲೋಕದರ್ಶನ ವರದಿ 


ಬೈಲಹೊಂಗಲ 23: ಕೃಷಿ ಅಧಿಕಾರಿಗಳ ಸಲಹೆ ಸೂಚನೆಯನ್ನು ಪಡೆದುಕೊಂಡು ಕೃಷಿಯಲ್ಲಿ ರೈತರು ವಿಜ್ಞಾನಿಗಳ ರೀತಿಯಲ್ಲಿ ಕೆಲಸ ಮಾಡುವದರೊಂದಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ತೆಗೆದಾಗ ಕೃಷಿ ಲಾಭದಾಯಕವಾಗಲಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು. 

     ಸಮೀಪದ ಮರಕುಂಬಿ ಗ್ರಾಮದ ವಾಲಿ ಫಾರ್ಮಹೌಸದಲ್ಲಿ, ಪಿ.ಎಮ್, ವಾಲಿ ಸಾವಯವ ಫೌಂಡೇಶನ್,ರೋಟರಿ ಕ್ಲಬ್ ಬೈಲಹೊಂಗಲ, ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮುರಗೋಡ ಹೋಬಳಿಯ ಅನ್ನದಾತರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ,  ಕೃಷಿ ಇಂದು ಉದ್ಯಮವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬ ರೈತರು ಮಾರಾಟಗಾರರ ಅನತಿಯಂತೆ ನಡೆದುಕೊಳ್ಳದೆ ತಾವು ಹಾಕಿದ ಬೆಳೆಗಳ ಬಗ್ಗೆ ಕೃಷಿ ವಿಜ್ಞಾನಿಗಳ, ಪ್ರಗತಿಪರ ರೈತರ ಸಲಹೆ  ಹಾಗೂ ಅಧಿಕಾರಿಗಳು ನಿಡುವ ಮುನ್ಸೂಚನೆಯಂತೆ ಕೃಷಿಯಲ್ಲಿ ನಿರತರಾದರೆ ಉತ್ಕೃಷ್ಟ ಬೆಳೆ ಪಡೆಯಬಹುದಾಗಿದೆ. ಎಲ್ಲಾ ರೈತರು ಮೊಬೈಲ್ ಹೊಂದಿದ್ದು ಅದನ್ನು ಬಳಸಿಕೊಂಡು ಇಲಾಖೆಯಿಂದ ಪ್ರತಿ ಹೊಬಳಿ ಮಟ್ಟದಲ್ಲಿ ಮಾಡಿರುವ ವಾಟ್ಸ್‌ಪ್ ಗ್ರುಪ್‌ಗಳಿಗೆ ಸೇರೆ​‍್ಡಯಾಗಿ ತಮಗೆ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅದರಲ್ಲಿ ಹಾಕಿದರೆ ಕ್ಷಣಾರ್ಧದಲ್ಲಿ ವಿಜ್ಞಾನಿಗಳಿಂದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ದೊರೆಯಲಿದೆ ಎಂದರು. 

    ಉಪ ಕೃಷಿ ನಿರ್ದೇಶಕ ಎಚ್‌.ಡಿ ಕೊಳೆಕರ ಮಾತನಾಡಿ, ಕೊವಿಡ್ ಹಾವಳಿಯಲ್ಲಿ ಎಲ್ಲಾ ಕ್ಷೇತ್ರಗಳು ಕೈ ಚೆಲ್ಲಿ ಕುಳಿತರು ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುವುದರ ರಾಷ್ಟ್ರೀಯ ಜಿಡಿಪಿಯಲ್ಲಿ ಕೃಷಿಕ್ಷೇತ್ರದಿಂದ ಶೇ 22ರಷ್ಟು ಸಾಧನೆ ಮಾಡಿದ ಹೆಗ್ಗಳಿಕೆ ರೈತರದ್ದಾಗಿದೆ. ಕೃಷಿ ಇಲಾಖೆಯಲ್ಲಿರು ಅಧಿಕಾರಿಗಳಿಂದ ರೈತರು ಮಾಹಿತಿ ಪಡೆದುಕೊಂಡು ಅವರು ನೀಡುವ ಮಾಹಿತಿಯ ಮೇಲೆ ದೃಡ ನಂಬಿಕೆಯಿಂದಿರಬೇಕು ಹಾಗೂ ಆಧುನಿಕ ತಂತ್ರಜ್ಞಾನ ವ್ಯವಸಾಯದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ರೈತರು ಸತತ ಪ್ರಯತ್ನ ಪಟ್ಟಲ್ಲಿ ಭಾರತ ಕೃಷಿಯಲ್ಲಿ  ಸ್ವಾವಲಂಬನೆಯಾಗಲಿದೆ. ರೈತರು ತರಬೇತಿ ಪಡೆದುಕೊಳ್ಳುವದು ಅತ್ಯಂತ ಮುಖ್ಯವಾಗಿದ್ದು ಪ್ರತಿದಿನ ಹೊಸ ಹೊಸ ಆವಿಷ್ಕಾರಗಳು ನಡೆಯುತಿದ್ದು ಅವುಗಳ ಮಾಹಿತಿ ಅಂಗೈಯಲ್ಲಿ ಸಿಗುತ್ತಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.  

  ಪ್ರಾಸ್ತಾವಿಕವಾಗಿ ಎಪಿಎಂಸಿ ಮಾಜಿ ಸದಸ್ಯ ಎಫ್‌.ಎಸ್‌.ಸಿದ್ದನಗೌಡರ ಮಾತನಾಡಿ, ನಾಡಿನಲ್ಲಿರುವ ಜೀವ ಸಂಕುಲಕ್ಕೆ ಆಹಾರ ಉತ್ಪಾದನೆ ಮಾಡುವ ಮಹತ್ತರ ಕಾರ್ಯದಲ್ಲಿ ತೋಡಗಿರುವ ರೈತರು ಕೃಷಿಯಲ್ಲಿ ಲಾಭವಾಗಲಿ ನಷ್ಟವಾಗಲಿ ತನ್ನ ಕಾರ್ಯವನ್ನು ಎಂದು ಬಿಡುವದಿಲ್ಲ.  

ಕೃಷಿಯನ್ನೆ ನಂಬಿ ಜೀವನ ನಡೆಸುವ ರೈತರ ಬಾಳಿಗೆ ಕೃಷಿಯಲ್ಲಿಯ ನೂತನ ಅವಿಷ್ಕಾರಗಳು ಹೊಸ ಭರವಸೆ ಮೂಡಿಸಿವೆ. ಹೊಸ ಯೋಜನೆ, ತಂತ್ರಜ್ಞಾನದ ಪ್ರಾತೇಕ್ಷಿಕೆ ರೈತರಿಗೆ ಸಲಹೆ ಸೂಚನೆ ಹಾಗೂ ತರಬೇತಿ ನೀಡುತ್ತಿರುವ ಕೃಷಿ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು. 

ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಹೃದಯ ತಜ್ಞ ಡಾ.ಬಸವರಾಜ ಮಹಾಂತಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಡಾ.ನಾಗರಜ ಹಲಸಗಿ, ಪಿ.ಎಮ್‌.ವಾಲಿ ಪೌಂಡೇಶನ್ ಅಧ್ಯಕ್ಷ ಪ್ರಗತಿಪರ ರೈತ ಆನಂದ ವಾಲಿ ಮಾತನಾಡಿದರು. 

  ಮಾಜಿ ಪುರಸಭೆ ಅಧ್ಯಕ್ಷೆ ಶೋಭಾ ವಾಲಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಂತ ನಾಗರಾಜ ದೇಸಾಯಿ, ತಾಲೂಕಾ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ್ ಪಾಟೀಲ್, ಕೃಷಿ ಅಧಿಕಾರಿ ನಾಗೇಶ್ ವೀರಕ್ತಮಠ ಯಮನಪ್ಪ ಮಾದರ ವೇದಿಕೆ ಮೆಲಿದ್ದರು. 

ಮುರಗೋಡ ಹೊಬಳಿಯ ಕೃಷಿ ಅನುವಗಾರರನ್ನು ಹಾಗೂ ಸಿಬ್ಬಂದಿಯನ್ನು ಸತ್ಕರಿಸಲಾಯಿತು. 

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಎಮ್‌.ಎ.ಅಮಟೆ, ಎಮ್‌.ಡಿ.ಸಾಲಹಳ್ಳಿ, ಶ್ವೇತಾ ಕೋಟಗಿ, ರವಿ ಕುರಬೆಟ್ಟ, ಸುನೀಲ್ ಪಾಟೀಲ, ಡಾ.ಮಹಾಂತೇಶ ಪುರಾಣಿಕಮಠ, ಹರ್ಷಾ ಡಮ್ಮಣಗಿ, ಮಲ್ಲಪ್ಪ ಸಣಕಲ್ಲ,  ಮಹಾಂತೇಶ ಜಿಗಜಿನ್ನಗಿ, ಮುನೀರ ಶೇಖ,  ನಾರಾಯಣ ಪಾಸಲಕರ, ಉಮೇಶ ಬೋಗುರ,  ಡಾ.ಚಿದಂಬರ ಕುಲಕರ್ಣಿ, ಸೋಮಶೇಖರ್ ಮೆಳ್ಳಿಕೆರಿ, ಸೋಮು ವನ್ನುರ, ಡಾ.ಸಾಗರ ಕುಲಕರ್ಣಿ,ಬಸಪ್ಪ ಪರವಣ್ಣವರ, ಮಲ್ಲಿಕಾರ್ಜುನ ಗುರಕನವರ, ರಾಹುಲ ಸಂಗನಾಯಕರ, ನಿಂಗಪ್ಪ ಅರವಳ್ಳಿ, ಡಾ.ಚಂದ್ರಶೇಖರ್ ಗಣಾಚಾರಿ,ಬಸನಗೌಡ ಪಾಟೀಲ, ಬಸವರಾಜ ಪಟ್ಟಣ, ಸಂಜಯ ಮಹಾಲೆ, ದೀಪಾ ಹಲಸಗಿ, ಸುಭಾಷ ಕಲಕುಟಕರ,ಬೊಮ್ಮನಾಯಕ ಪಾಟೀಲ, ವಿಜಯಾ ಕಳ್ಳಿಬಡ್ಡಿ,  ಡಾ.ಗೀತಾ ಪುರಾಣಿಕಮಠ, ರಾಘವೇಂದ್ರ ರುದ್ರ​‍್ಪನವರ, ಸುಮಂಗಲಾ ಜಿಗಜಿನ್ನಗಿ, ಸುಜಾತಾ ಮಹಾಲೆ, ಶ್ರೀದೇವಿ ವಾಲಿ, ಶ್ರೀಕಾಂತ್ ಪೂಜಾರ ನೂರಾರು ರೈತರು ಉಪಸ್ಥಿತರಿದ್ದರು. 


ಈ ಸಂದರ್ಭದಲ್ಲಿ ಮಿನಿ ಟ್ಯಾಕ್ಟರ್, ಕೃಷಿ ಪರಿಕರಗಳ ಪ್ರದರ್ಶನ, ಸೋಲರ್ ಪಂಪಶೆಟ್, ರಸಗೊಬ್ಬರ ಕೀಟನಾಶಕಗಳ ವ್ಯಾಪಾರಸ್ಥರಿಂದ ರೈತರಿಗೆ ಮಾಹಿತಿ, ಸೋಯಾಬಿನ್ ಕ್ಷೇತ್ರೋತ್ಸವ ಹಾಗೂ ಕೃಷಿ ಓಷಧಿ ಸಿಂಪರಣೆಯ ಡ್ರೋಣ್ ಪ್ರಾತ್ಯಕ್ಷಿಕೆಯನ್ನು ಆಯೋಜನೆ ಮಾಡಲಾಗಿತ್ತು. ಇವನೆಲ್ಲ ಕಂಡ ರೈತರು ಡ್ರೋಣ್ ಖರೀದಿಸಲು ಮತ್ತು ಕೃಷಿಯ ನೂತನ ಪರಿಕರಗಳ ಬಳಕೆಯ ಬಗ್ಗೆ ಮಾಹಿತಿ ಪಡೆದುಕೊಂಡು ಖುಷಿ ಪಟ್ಟರು. 


ಸುದ್ದಿ ಓದಿ