ಹೋರಾಟದಲ್ಲಿ ಮೃತಪಟ್ಟ ರೈತರಿಗೆ 50 ಲಕ್ಷ ಪರಿಹಾರ ನೀಡಲಿ
ಲೋಕದರ್ಶನ ವರದಿ
ಯರಗಟ್ಟಿ 26: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟದಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಈರನಗೌಡ ಪಾಟೀಲ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ದೇಹಲಿ ಕಿಸಾನ ಮೋರ್ಚಾ ಕರೆ ಮೆರೆಗೆ ರೈತ ಸಂಘ, ಹಸಿರು ಸೇನೆ ಹಾಗೂ ರೈತಪರ ಸಂಘಟನೆಗಳ ಪ್ರತಿಭಟನೆಯಲ್ಲಿ ಮಾತನಾಡಿದರು.
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಿವುನಗೌಡ ಗೌಡರ ಮಾತನಾಡಿ ವಿದ್ಯುತ್ ಖಾಸಗೀಕರಣ ನೀತಿ, ರೈತರ ಮೇಲೆ ದಾಖಲಾದ ಪ್ರಕರಣಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ರೈತ ಸಂಘಟನೆಗಳು ಹೆದ್ದಾರಿ ಬಂದ್ ಮಾಡಿ ಪ್ರತಿಭಟಣೆ ಮಾಡಿದ್ದರಿಂದ ಕೆಲಹೊತ್ತು ಸಂಗೊಳ್ಳಿ ರಾಯಣ್ಣ ವೃತ್ತದ ನಾಲ್ಕು ಹೆದ್ದಾರಿಗಳು ಟ್ರಾಫಿಕ್ ಜಾಮ್ ಆಗಿ ಸಂಚಾರ ಅಸ್ಥವ್ಯಸ್ಥವಾಯಿತು. ಪ್ರಯಾಣಿಕರು ಪರದಾಡಿದರು.
ಈ ಸಂಧರ್ಭದಲ್ಲಿ ರೈತ ಸಂಘ ತಾಲೂಕಾ ಅಧ್ಯಕ್ಷ ಪ್ರವೀಣ ಪಠಾತರ, ಸೋಮು ರೈನಾಪೂರ, ಶಂಕರ ಹುಗ್ಗಿ, ಬಾಳಪ್ಪ ಪಾಟೀಲ, ರಾಜು ಪಾಟೀಲ, ಯಕ್ಕೇರೆಪ್ಪ ತಳವಾರು, ಶೇಖರ ಖಿಲಾರಿ, ರಾಮಕೃಷ್ಣ ಯಳ್ಳೆಮ್ಮಿ, ಮಂಜು ಅಡಕಲಗುಂಡಿ ಮುಂತಾದವರಿದ್ದರು.