ಇಂಡಿ

ವೈಜ್ಞಾನಿಕ ಆಡು ಸಾಕಾಣಿಕೆ ಮಾಡುವುದರಿಂದ ರೈತರಿಗೆ ಲಾಭ: ಶಿಂದೆ

ವೈಜ್ಞಾನಿಕ ಆಡು ಸಾಕಾಣಿಕೆ  ಮಾಡುವುದರಿಂದ ರೈತರಿಗೆ ಲಾಭ: ಶಿಂದೆ

ಲೋಕದರ್ಶನ ವರದಿ 

ಇಂಡಿ 27: ವೈಜ್ಞಾನಿಕ ಆಡು ಸಾಕಾಣಿಕೆ  ಮಾಡುವುದರಿಂದ ರೈತರಿಗೆ ಲಾಭದಾಯಕ. ಹೈನುಗಾರಿಕೆ ಉಪಕಸುಬಾಗಿದ್ದು. ಇದನ್ನು ವೈಜ್ಞಾನಿಕವಾಗಿ ಮಾಡಿದಲ್ಲಿ ಅತೀ ಹೆಚ್ಚು ಆದಾಯ ಪಡೆದು ಯಶಸ್ವಿಯಾಗಿ ಹೊರ ಹೊಮ್ಮಬಹುದು ಎಂದು  ಕೆವಿಕೆ ವಿಜ್ಞಾನಿ ಡಾ. ಸಂತೋಷ ಶಿಂದೆ ಹೇಳಿದರು. 


ಅವರು ಗುರುವಾರ ಪಟ್ಟಣದ ರೈಲು ನಿಲ್ದಾಣ ರಸ್ತೆಯ ಕೃಷಿ ವಿಜ್ಞಾನಿ ಕೇಂದ್ರದಲ್ಲಿ ವೈಜ್ಞಾನಿಕ ಆಡು ಸಾಕಣಿಕೆ ತರಬೇತಿಯಲ್ಲಿ ಮಾತನಾಡಿದರು. 

ಆಡುಗಳು ಅವುಗಳ ತಳಿಗಳ ಆಯ್ಕೆ, ಆಹಾರ, ಪೋಷಣೆ ಮತ್ತು ಕಾಯಿಲೆಗಳ ಕುರಿತು ರೈತರಿಗೆ ಮೂರು ದಿನಗಳ ಕಾಲ ಉಪನ್ಯಾಸ ಮತ್ತು ಆಡು ಸಾಕಾಣಿಕೆ ಕ್ಷೇತ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಒದಗಿಸುತ್ತೆವೆ ಎಂದರು. 

ತರಬೇತಿಯಲ್ಲಿ 50ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ಪಾಲ್ಗೊಂಡಿದ್ದರು.ಡಾ. ಎಸ್‌. ಎಸ್‌. ಅಂಜುಮ್, ವಿಜ್ಞಾನಿ (ಸಸ್ಯರೋಗ ಶಾಸ್ತ್ರ) ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ