ಇಂಡಿ

ಏತ ನೀರಾವರಿ ಯೋಜನೆಗೆ ಸರಕಾರ ಅನುದಾನ ರೈತರಲ್ಲಿ ಸಂತಸ: ಪಟ್ಟಣಶೆಟ್ಟಿ

ಏತ ನೀರಾವರಿ ಯೋಜನೆಗೆ ಸರಕಾರ ಅನುದಾನ ರೈತರಲ್ಲಿ ಸಂತಸ: ಪಟ್ಟಣಶೆಟ್ಟಿ
ಇಂಡಿ: ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಭಾವಚಿತ್ರ.

ಇಂಡಿ: ಇಂಡಿ-ಚಡಚಣ ತಾಲ್ಲೂಕಿಗೆ ಅನುಕೂಲವಾಗುವಂತೆ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಸರಕಾರ 3800 ಕೋಟಿ ಅನುದಾನ ಮಂಜೂರು ಮಾಡಿದ್ದು ಬಜೆಟ್‌ನಲ್ಲಿ 784 ಕೋಟಿ ರೂ ಅನುದಾನ ಒದಗಿಸಿದ್ದು ಈ ಭಾಗದ ರೈತರಲ್ಲಿ ಸಂತಸ ತಂದಿದೆ. ಇಂಡಿ ಚಡಚಣ ತಾಲೂಕಿನ ರೈತರ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರನ್ನು ಅಭಿನಂದಿಸುವುದಾಗಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು. 

ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 

ಝಳಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಸಾಕಷ್ಟು ದಿನ ಪ್ರತಿಭಟನೆ ನಡೆಸಿ ನೀರಾವರಿ ಮಾಡುವಂತೆ ಒತ್ತಾಯಿಸಿದ್ದರು. ಆ ಪ್ರತಿಭಟನೆಗೆ ಸಂಸದರು ಭೇಟಿ ನೀಡಿ ನೀರಾವರಿ ಯೋಜನೆ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದರು. ಭರವಸೆ ಈಡೇರಿಸುವಲ್ಲಿ ಸಂಸದರು ಶ್ರಮ ವಹಿಸಿದ್ದಾರೆ. 3800 ಕೋಟಿ ರೂಪಾಯಿ ಯೋಜನೆಯ ಪೈಕಿ ಪ್ರಥಮ ಹಂತದಲ್ಲಿ 784 ಕೋಟಿ  ಹಣ ಬಿಡುಗಡೆಗೊಳಿಸಿದ್ದು ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ ನಂತರ ಉಳಿದ ಹಣವನ್ನು ಸಹ ಸರಕಾರ ಬಿಡುಗಡೆ ಮಾಡುತ್ತದೆ. ಈ ಭಾಗದ ರೈತರ ಪರವಾಗಿ ಸರಕಾರಕ್ಕೆ ಅಭಿನಂದಿಸುವುದಾಗಿ ಪಟ್ಟಣಶೆಟ್ಟಿ ತಿಳಿಸಿದ್ದಾರೆ. 

ಸುದ್ದಿ ಓದಿ