ಬೈಲಹೊಂಗಲ

‘ಪರಿಸರ ನಮ್ಮ ಬದುಕಿನ ಅವಿಭಾಜ್ಯ ಅಂಗ’

‘ಪರಿಸರ ನಮ್ಮ ಬದುಕಿನ ಅವಿಭಾಜ್ಯ ಅಂಗ’

ಲೋಕದರ್ಶನ ವರದಿ 

ಬೈಲಹೊಂಗಲ 06: ಪರಿಸರ ನಮ್ಮ ಬದುಕಿನ ಅವಿಭಾಜ್ಯ ಅಂಗ. ನಮ್ಮ ದೈನಿಕ ಬದುಕನ್ನು ನಿಯಂತ್ರಿಸುವ ಪರಿಸರವನ್ನು ನಾವು ಇಂದು ಸಂರಕ್ಷಿಸಬೇಕಾಗಿದೆ ಎಂದು ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಡಸೋಮನ್ನವರ ಹೇಳಿದರು. 

    ಅವರು ತಾಲೂಕಿನ ಕೆಂಗಾನೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಸಸಿ ನೆಟ್ಟು ನೀರುಣಿಸಿ ಮಾತನಾಡಿ, ಪರಿಸರ ನಾಶದಿಂದ ಗಾಳಿ ಬೆಳಕು, ನೀರು ಸೇರಿದಂತೆ ಪ್ರಾಣಿ, ಪಕ್ಷಿಗಳ ಸಂಕುಲ ನಾಶವಾಗುತ್ತಿದೆ. ಇದನ್ನು ಅರಿತು ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸುವ ಸಸಿಗಳನ್ನು ಬೆಳ್ರಸುವ ಕಾರ್ಯ ಮಾಡಬೇಕಾಗಿದೆ ಎಂದರು. 

    ಮುಖ್ಯೋಪಾಧ್ಯಾಯ ಬಿ.ವಾಯ್‌.ಅಂಕಲಗಿ ಮಾತನಾಡಿ, ಮನುಷ್ಯ ಎಷ್ಟೆ ಆಸ್ತಿ ಅಂತಸ್ತು ಗಳಿಸಿದ್ದರೂ ಕೂಡಾ ಆರೋಗ್ಯ ಸಂಪತ್ತು ಇಲ್ಲದಿದ್ದರೆ ಬದುಕು ವ್ಯರ್ಥ ಆದ್ದರಿಂದ ಬದುಕು ಆರೋಗ್ಯವಾಗಿರಬೇಕಾದರೆ ನಿಸರ್ಗ, ಅರಣ್ಯ ಪರಿಸರ ಅತ್ಯವಶ್ಯಕ ಅದನ್ನು ಕಾಪಾಡುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಬೆಕು ಎಂದರು. 

 ಇಕೋ ಕ್ಲಬ ನ ಶಿಕ್ಷಕಿಯರಾದ  ಆರ್‌.ಡಿ.ಚಲವಾದಿ,  ಬಿ.ಸಿ.ಅಂಬರಶಟ್ಟಿ, ಸೇರಿದಂತೆ ಶಿಕ್ಷಕ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು. ಹಲಸು ಮಾವು ಬಾಳೆ ಮತ್ತು ಬೇವಿನಮರದ ಸಸಿಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು. 


ಸುದ್ದಿ ಓದಿ