ಇಂಡಿ

ಪತ್ರಾಸ್ ಶೆಡ್ಡಿಗೆ ವಿದ್ಯುತ್ ಸ್ಪರ್ಶ: ಅಪಾರ ಮೌಲ್ಯದ ವಸ್ತು ಹಾನಿ

ಪತ್ರಾಸ್ ಶೆಡ್ಡಿಗೆ ವಿದ್ಯುತ್ ಸ್ಪರ್ಶ: ಅಪಾರ ಮೌಲ್ಯದ ವಸ್ತು ಹಾನಿ

ಇಂಡಿ: ತಾಲೂಕಿನ ತೆನ್ನೆಳ್ಳಿ ಗ್ರಾಮದ ತೋಟವೊಂದರ ಪತ್ರಾಸ್ ಶೆಡ್ಡಿಗೆ ಬುಧವಾರ ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಹಾನಿಯಾಗಿವೆ. ನಿಹಾಲ್ ನಬಿಸಾಬ ಜಮಾದಾರ ಅವರಿಗೆ ಸೇರಿದ ಪತ್ರಾಸ್ ಶೆಡ್ ಎಂದು ತಿಳಿದು ಬಂದಿದೆ. 

1 ಚೀಲ ಜೋಳ, 1 ಚೀಲ ಗೋಧಿ, 2 ಚೀಲ ಅಕ್ಕಿ, 1.5 ತೊಲಿ ಬಂಗಾರ, 10 ಸಾವಿರ ನಗದು ಹಣ ಸುಟ್ಟು ಕರಕಲಾಗಿದೆ. 

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಷ್ಟರಲ್ಲಿ ವಸ್ತುಗಳು ಸುಟ್ಟು ಕರಕಲಾಗಿದ್ದವು. 

ಘಟನಾ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ರವಿ ಹೊಸೂರ ಮತ್ತಿತರರು ಭೇಟಿ ನೀಡಿದ್ದಾರೆ. 

ಪತ್ರಾಸ್ ಶೆಡ್ಡಿಗೆ ಬೆಂಕಿ ತಗುಲಿದ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ರವಿ ಹೊಸೂರ ಭೇಟಿ ನೀಡಿ ಪರೀಶೀಲನೆ ನಡೆಸಿದರು. 


ಸುದ್ದಿ ಓದಿ