ನಾಟಕಗಳು ಕೇವಲ ಮನರಂಜನೆಯ ಮಾಧ್ಯಮವಲ್ಲ: ಪಾಟೀಲ
ಇಂಡಿ: ನಾಟಕಗಳು ಕೇವಲ ಮನರಂಜನೆಯ ಮಾಧ್ಯಮವಲ್ಲ. ಸತ್ಯಹರಿಶ್ಚಂದ್ರ ನಾಟಕ ನೋಡಿದ ಬಾಲಕ ಗಾಂಧಿಜಿ ಅವರು ತಮ್ಮ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಲು ಕಾರಣವಾಯಿತು. ಮುಂದೆ ಭಾರತ ದೇಶದದಲ್ಲಿ ಮಾಹಾತ್ಮ ಎಂಬುವ ಹೆಸರಿನಿಂದ ಚಿರಪರಿಚಿತರಾಗಿದ್ದಾರೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಹೇಳಿದರು.
ಅವರು ಮಂಗಳವಾರ ತಾಲೂಕಿನ ಬೂದಿಹಾಳ ಗ್ರಾಮದ ರೇಣುಕಾ ಯಲ್ಲಮ್ಮನ ಜಾತ್ರೆ ಅಂಗವಾಗಿ “ರೈತನ ಮಗ” ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.
ನಾಟಕಗಳು ಗ್ರಾಮೀಣರ ಜೀವಾಳ. ಜಾತ್ರೆ, ಹಬ್ಬ ಹರಿದಿನಗಳಲ್ಲಿ ನಾಟಕಗಳು ಇಲ್ಲದೆ ಜಾತ್ರೆಗಳು ಆಗುವುದು ಕಡಿಮೆ. ನಾಟಕಗಳು ನಮಗೆಲ್ಲ ಪ್ರೇರಣಾ ಶಕ್ತಿಯಾಗಿವೆ. ನಾಟಕಗಳಿಂದ ಯುವಕರು ಉತ್ತಮ ಸಂದೇಶಗಳನ್ನು ಅಳವಡಿಸಿಕೊಂಡು ಇತರರಿಗೆ ದಾರಿ ದೀಪವಾಗಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ ದುಂಡಯ್ಯ ಮಠ, ಮಾಜಿ ತಾಂಪಂ ಸದಸ್ಯ ಧರ್ಮರಾಜ, ಸಿದ್ದು ಡಂಗಾ, ರಾಘವೇಂದ್ರ ಕಾಪಸೆ, ಚಂದ್ರಕಾಂತ ಬಿರಾದಾರ, ರಮೇಶಗೌಡ ಪಾಟೀಲ, ಪೀರಪ ಹೂಟಗಾರ, ಧನಶ್ರೀ ವಾಲಿಕಾರ, ನಾಗೇಂದ್ರ ವಾಲಿಕಾರ, ಗಜು ವಾಲಿಕಾರ, ಸಾಹೇಬಣ್ಣ ನಾವಿ, ಭೈರಸಿದ್ದ ಬಿಳೂರ, ಅಶೋಕ ಪೀರಗೋಂಡ, ಎಮ್.ಎಸ್. ಹೂಸೂರ, ರವಿಕುಮಾರ್ ವಾಲಿಕಾರ, ಯಶವಂತ ಬಿರಾದಾರ, ಈರ್ಪ ವಾಲಿಕಾರ, ಬಸವರಾಜ ಕೋಳಿ, ಅಶೋಕಗೌಡ ಬಿರಾದಾರ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.