ವಿಜಯಪುರ

ಕೊಲಂಬೊ ಆಯುರ್ವೇದ ಸಮ್ಮೇಳನಕ್ಕೆ ಡಾ. ಸಂಜಯ ಕಡ್ಲಿಮಟ್ಟಿ ಆಹ್ವಾನ

ಕೊಲಂಬೊ ಆಯುರ್ವೇದ ಸಮ್ಮೇಳನಕ್ಕೆ ಡಾ. ಸಂಜಯ ಕಡ್ಲಿಮಟ್ಟಿ ಆಹ್ವಾನ



          ವಿಜಯಪುರ 17 : ನಗರದ ಬಿ.ಎಲ್‌.ಡಿ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಆಸ್ಪತ್ರೆ ಮತ್ತು ನಗರ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಅವರನ್ನು ಶ್ರೀಲಂಕಾ ದೇಶದ ಕೊಲಂಬೊ ವಿಶ್ವವಿದ್ಯಾಲಯದ ಪೋಸ್ಟ್‌ ಗ್ರ್ಯಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಇಂಡೀಜೀನಸ್ ಮೆಡಿಸನ್ ಇದರ ಆಶ್ರಯದಲ್ಲಿ ನವೆಂಬರ್ 20  ಮತ್ತು 21  ರಂದು ನಡೆಯಲಿರುವ ಎರಡು ದಿನಗಳ ಆಯುರ್ವೇದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ವಕ್ತಾರನ್ನಾಗಿ ಆಹ್ವಾನಿಸಲಾಗಿದೆ.

         ಡಾ. ಸಂಜಯ ಕಡ್ಲಿಮಟ್ಟಿ ಅವರು ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆ ಮತ್ತು ಸೇವೆಯನ್ನು ಗುರುತಿಸಿ ಈ ಆಹ್ವಾನವನ್ನು ನೀಡಲಾಗಿದೆ.  ಡಾ. ಸಂಜಯ ಕಡ್ಲಿಮಟ್ಟಿ ಅವರು ನವೆಂಬರ್ 18 ರಂದು ಬೆಂಗಳೂರಿನಿಂದ ಕೊಲಂಬೊಗೆ ಪ್ರಯಾಣ ಬೆಳೆಸಲಿದ್ದಾರೆ. ಅವರ ಈ ಸಾಧನೆಗೆ ಬಿ.ಎಲ್‌.ಡಿ ಈ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಮತ್ತು ಸಿಬ್ಬಂದಿ ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ