ಬೈಲಹೊಂಗಲ

ದೊಡವಾಡ: ಪಶು ಆರೋಗ್ಯ ತಪಾಸಣಾ ಅಭಿಯಾನ

ದೊಡವಾಡ: ಪಶು ಆರೋಗ್ಯ ತಪಾಸಣಾ ಅಭಿಯಾನ

ಬೈಲಹೊಂಗಲ 07: ತಾಲೂಕಿನ ದೊಡವಾಡ ಗ್ರಾಮದ ಸರಕಾರಿ ಪಶು ಆರೋಗ್ಯ ಕೇಂದ್ರದಲ್ಲಿ ಸ್ಥಳೀಯ ಸಂಗಮೇಶ್ವರ ಪಿಕೆಪಿಎಸ್ ಹಾಗೂ ಎಫ್‌ಆರ್‌-ಕ್ರಿಬ್ಕೋ ಲಿಮಿಟೆಡ್ ಬೆಳಗಾವಿ ಇವರ ಸಹಯೋಗದಲ್ಲಿ ಪಶುಗಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. 

ಮಹಾಂತಯ್ಯ ಹಿರೇಂಮಠ ಅವರು  ಗೋ ಪೂಜೆ ನೆರವೇರಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪ್ರಾಣಿಗಳಲ್ಲಿ ಕಂಡು ಬರುವ ಬಂಜೆತನ, ಸಿಸ್ಟಿಕ್ ಅಂಡಾಶಯ ಖಾಯಿಲೆಗಳು, ಪ್ಲೈಸಿಸ್ಟಿಕ್ ಅಂಡಾಶಯ ಖಾಯಿಲೆ, ನಿರಂತರ ಕಾರ​‍್ಪಸ ಲೂಟಿಯಂ, ಸಾಮಾನ್ಯ ದೌರ್ಬಲ್ಯ, ಪಯೋಮೆಟ್ರಾ, ಅನಾರೆಕ್ಸಿಯಾ ಮೊದಲಾದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಓಷಧೋಪಚಾರ ತಿಳಿಸಲಾಯಿತು. ಇದೇ ವೇಳೆ ಖನಿಜ ಮಿಶ್ರ್ರಣ ಮತ್ತು ಮಾತ್ರೆಗಳನ್ನು ವಿತರಿಸಲಾಯಿತು.  

ಗ್ರಾಮದ ರೈತರು ಪಶು ಅಭಿಯಾನ ಏರಿ​‍್ಡಸಿದ್ದ ಕ್ರಿಬ್ಕೋ ಸಂಸ್ಥೆಯವರಿಗೆ ಅಭಿನಂದನೆ ತಿಳಿಸಿದರು.  

ಬೆಳಗಾವಿ ಕ್ರಿಬ್ಕೋ ಅದಿಕಾರಿ ಆರ್‌.ತಿಪ್ಪೇಸ್ವಾಮಿ, ಮೂಗಬಸವ ಪಶು ವೈದ್ಯಾಧಿಕಾರಿ ಡಾ.ವೀರೇಶ ಎಚ್‌.ಬಿ, ಬೂದಿಹಾಳದ ಡಾ. ಪೂರ್ಣಚಂದ್ರ ಕೆ.ಟಿ, ದೊಡವಾಡ ಪಶು ವೈದ್ಯಕೀಯ ನೀರೀಕ್ಷಕ ಎಂ.ಜೆ.ದೇವಲಾಪೂರ, ವೈದ್ಯಕೀಯ ನೀರೀಕ್ಷಕ ಜೆ.ಎನ್‌.ದೇವಲಾಪೂರ, ವೆಟರ‌್ನರಿ ಇನಸ್ಪೆಕ್ಟರ್ ಪ್ರವೀಣ ನಾಯ್ಕರ್, ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಉಪಾಧ್ಯಕ್ಷ ಉದಯ ಕೊಟಬಾಗಿ, ಸಿಇಓ ಎಮ್‌.ಎಸ್‌.ಶಿಂಧೆ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ