ಸೋಲಾಗಿದ್ದರೂ ಕ್ಷೇತ್ರದ ಜನರ ಕಷ್ಟಗಳಿಗೆ ಸದಾ ಸ್ಪಂದಿಸುವೆ: ಪಾಟೀಲ
ಇಂಡಿ 24: ವಿಧಾನಸಭಾ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋಲಾಗಿದ್ದರೂ ಕ್ಷೇತ್ರದ ಜನರ ಕಷ್ಟಗಳಿಗೆ ಸದಾ ಸ್ಪಂದಿಸುವೆ ಎಂದು ಪರಾಜಿತ ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ ಹೇಳಿದರು.
ಬುಧವಾರ ಪಟ್ಟಣದ ರೈಲ್ವೇ ಸ್ಟೇಷನ್ ರಸ್ತೆಯ ಕಣ್ಣಿ ಬಿಡ್ಡಲಿಂಗ್ದಲ್ಲಿ ಹಮ್ಮಿಕೊಂಡ ಜೆಡಿಎಸ್ ಪಕ್ಷದ ಆತ್ಮವ ಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ನನಗೆ ಸೋಲಿಸಲು ಹಣದ ಹೂಳೆ ಹರಿಸಿ ಜನರ ಮನಸ್ಸು ಬದಲಾವಣೆ ಮಾಡಿ ಕುತಂತ್ರ ದಿಂದ ಸೋಲಿಸಿದ್ದಾರೆ. ಇಂಡಿ ಮತಕ್ಷೇತ್ರದ ಸಮಸ್ತ ನಾಗರೀಕರು 62 ಸಾವಿರ ಮತಗಳನ್ನು ನೀಡಿ, ಒಬ್ಬ ಹೋರಾಟಗಾರಾರನ ದುಡಿಮೇಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರಿ. ನಾನು ತಮ್ಮಗೆ ಕೋಟಿ ಕೋಟಿ ನಮನಗಳು ಸಲ್ಲಿಸುತ್ತೇನೆ. ಜೆಡಿಎಸ್ ಕಾರ್ಯಕರ್ತರು ಹಾಗೂ ನನ್ನ ಅಭಿಮಾನಿಗಳು ಎದೆಗುಂದದೆ ಹೋರಾಟ ಮಾಡಿ, ನಾನು ನಿಮ್ಮ ಜೋತೆ ಸದಾ ಇರುತ್ತೇನೆ ಎಂದ ಅವರು, ಕಾಂಗ್ರೆಸ್ನ ಬೋಗಸ್ ಗ್ಯಾರಂಟಿ ಕಾರ್ಡ್ ಮತದಾರರನ್ನು ಆರ್ಕಷಣೆ ಮಾಡಿದ ಪರಿಣಾಮ ನಾನು ಸೋಲು ಅನುಭವಿಸಬೇಕಾಯಿತು. ಇದು ನನ್ನ ಸೋಲಲ್ಲ, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಸುಮಾರ 62 ಸಾವಿರ ಮತಗಳು ಹಾಕಿದ ಕ್ಷೇತ್ರದ ಜನರ ನಡುವೆ ಇದ್ದು, ನೋವಿಗೆ ಸ್ಪಂದಿಸುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ, ಪಂಚಾಯಿತಿ ಕೇಂದ್ರಕ್ಕೆ ಭೇಟಿ ನೀಡುತ್ತೇನೆ. ತಾಲೂಕಿನಲ್ಲಿ ಕಮಿಷನ್ ದಂಧೆಯನ್ನು ಎಲ್ಲರೂ ಸೇರಿ ನಿಲ್ಲಿಸೋಣ. ಇನ್ಮುಂದೆ ತಾಲೂಕಿನಲ್ಲಿ ಅರ್ಜಿ ಹಾಕಿದವನಿಗೆ ಸವಲತ್ತು ಸಿಗಬೇಕು. ಒಂದೇ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಹರಿದು ಹೋಗಲು ಬಿಡುವುದಿಲ್ಲ. ಎಂದು ಹೇಳಿದರು.
ರೇವಣಸಿದ್ದ ಗೋಡಕೆ ಮಾತನಾಡಿ, ಬಿ.ಡಿ. ಪಾಟೀಲರ ಸೋಲು ನಿಜವಾದ ಸೋಲಲ್ಲ. ಎಲ್ಲರೂ ಸೋತು ಗೆದ್ದವರೇ. ಜನ ಕಾರ್ಯಕರ್ತರು ಸದಾ ಎಚ್ಚರವಾಗಿರಬೇಕು. ಅನ್ಯಾಯ ಕಂಡರೆ ತಡೆಯುವ ಶಕ್ತಿ ನಮ್ಮೆಲ್ಲದಾಗಿರಬೇಕು ಎಂದರು.
ಟಿ.ಎಸ್. ಪೂಜಾರಿ, ನಾಗೇಶ ತಳಕೇರಿ, ಶರಣು ಡಂಗಿ, ಸುನಂದಾ ವಾಲಿಕಾರ, ಮುತ್ತಪ್ಪ ಪೋತೆ ಮಾತನಾಡಿ, ಸೋಲಿನ ಪರಾಮರ್ಶೆ ಮಾಡಿ ಕಾರ್ಯಕರ್ತರು ಎದೆ ಗುಂದದೆ ಸ್ವಾಭಿಮಾನದಿಂದ ರಾಜಕಾರಣ ಮಾಡಿ, ಸಮಸ್ತ 62 ಸಾವಿರ ಮತದಾರರು ತಮ್ಮ ಜೋತೆ ನಾವುಗಳು ಇದ್ದೀವೆ ಎಂದರು.
ಮರೇಪ್ಪ ಗಿರಣಿವಡ್ಡರ, ಶ್ರೀಶೈಲಗೌಡ ಪಾಟೀಲ, ಜಬ್ಬಾರ್ ಅಣ್ಣಾ ಅರಬ್, ಸಿದ್ದು ಡಂಗಾ, ಶರಣಪ್ಪ ಹೂಸೂರ, ಸದ್ದಾಂ ಅರಬ್, ಮಹಿಬೂಬ ಬೇವನೂರ, ಅಲ್ಲಾ ಮೆಟಗಾರ, ಪುಂಡು ಅಲಬಗೋಂಡ, ಯಲಗೋಂಡ ಪೂಜಾರಿ, ಎಮ್.ಎಸ್. ಪೂಜಾರಿ, ಮಹಾದೇವ ಮಕಣಪೂರ, ರಾಜು ಮುಲ್ಲಾ, ನಿಯಾಝ್ ಅಗರಖೇಡ, ಫಜಲು ಮುಲ್ಲಾ, ಸಂತೋಷ ಲಚ್ಚ್ಯಾಣ, ಬಾಳು ರಾಠೋಡ, ಎಮ್.ಎಮ್. ಬಿರಾದಾರ, ಶ್ರೀನಾಥ್ ವಾಲಿಕಾರ, ಸುದರ್ಶನ್ ಉಪಾಧ್ಯಾಯ, ಸುದರ್ಶನ್ ಕ್ಷೇತ್ರಿ, ಮುತ್ತಪ್ಪ ಚಿಕ್ಕಬೇವನೂರ, ಕಾಸು ಅವರಾದಿ, ದುಂಡು ಬಿರಾದಾರ, ಹಣಮಂತ ಹಿರೇಕುರಬರ, ಶಂಕರ ಮೆಟಗಾರ, ಯಶವಂತ ಕಾಡೆಗೋಳ, ಶಾಮ ಪೂಜಾರಿ, ಬಸುಗೌಡ ಬಿರಾದಾರ, ಜಯರಾಮ ಪರೀಟ, ರವಿ ಕೆಂಗಾರ, ಅರವಿಂದ ಮೈದರಗಿ, ಗಾಳೇಪ್ಪ ಚೌಡಿಹಾಳ, ಪರುತಯ್ಯ ಮಠಪತಿ, ಅರವೀಂದ ಕಟ್ಟಿ, ಮಲ್ಲಕಣಗೌಡ ಬಿರಾದಾರ, ಖಲೀಲ್ ತೋಳನೂರ, ವಿಠ್ಠಲ ಹಂಜಗಿ, ಬಾಬು ಮೇತ್ರಿ, ರಾಜು ಬನಗೋಂಡ, ಅಪ್ಪು ಸಾಹುಕಾರ ಜಮಖಂಡಿ, ಎಮ್.ಡಿ. ವಾಲಿಕಾರ, ರವಿ ಶಿಂದೆ, ಜಲೀಲ್ ದಡೇದ, ಶಿವು ಮುರಗುಂಡಿ ಸೇರಿದಂತೆ ಅನೇಕರು ಇದ್ದರು.