ಯರಗಟ್ಟಿ

ಎಮ್‌ಇಎಸ್ ಸಂಘಟನೆ ನಿಷೇಧಿಸಲು ಆಗ್ರಹ

ಎಮ್‌ಇಎಸ್ ಸಂಘಟನೆ ನಿಷೇಧಿಸಲು ಆಗ್ರಹ

ಲೋಕದರ್ಶನ ವರದಿ 


ಯರಗಟ್ಟಿ 20: ಎಮ್‌ಇಎಸ್ ಪುಂಡರು ವಿಶ್ವಗುರು ಬಸವಣ್ಣ, ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ, ಶಿವಾಜಿ ಮಹಾರಾಜರ ಪುತ್ತಳಿಗೆ ಅಪಮಾನ ಮಾಡುವುದಲ್ಲದೆ ಕನ್ನಡ ಬಾವುಟ ಸುಟ್ಟು ಹಾಕಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಪಟ್ಟಣದ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆಗಿಳಿದು ಮಾನವ ಸರಪಳಿ ನಿರ್ಮಿಸಿ ಎಮ್‌ಇಎಸ್ ವಿರುದ್ಧ ಘೋಷಣೆ ಕೂಗುತ್ತಾ ಸರ್ಕಾರ ಎಮ್‌ಇಎಸ್ ಸಂಘಟನೆ ಬಂದ್ ಮಾಡಲು ಆಗ್ರಹಿಸಿದರು. 

ನಂತರ ಸಂಘಟನೆಯ ಮುಖಂಡರು ಮಾತನಾಡಿ ಕನ್ನಡ ನಾಡಿಗಾಗಿ ದೇಶದ ಏಕತೆಗಾಗಿ ಹೋರಾಡಿದ ಮಹಾತ್ಮರ ಪ್ರತಿಮೆಗಳನ್ನು ಅವಮಾನಿಸುತ್ತಿರುವ ಎಎಮ್‌ಇಎಸ್ ಪುಂಡರನ್ನು ಗಲ್ಲಿಗೇರಸಬೇಕು ಇಲ್ಲದಿದ್ದರೆ ಗಲ್ಲಿಗಲ್ಲಿಗಳಿಂದ ಕನ್ನಡದ ಉಳಿವಿಗಾಗಿ ಹೋರಾಟ ಮಾಡಲಾಗುವುದು ಎಂದರು. 

 ಈ ಸಂಧರ್ಭದಲ್ಲಿ ಮಾಜಿ ಸೈನಿಕ ಕುಮಾರ ಹಿರೇಮಠ, ಕುಮಾರ ಜಕಾತಿ, ಅರುಣ ಪಟ್ಟೇದ, ಲಿಂಗರಾಜ ಕುರಬಗಟ್ಟಿಮಠ, ಶಿವುಕುಮಾರ ಜಕಾತಿ, ಶಿವಾನಂದ ಪಟ್ಟಣಶೆಟ್ಟಿ, ಕಿಟ್ಟಿ ತೊರಗಲ್, ಇಚ್ಚಾ ಹಾರೂಗೇರಿ, ಆನಂದ ಬಾಗೋಡಿ, ಮಹಾಂತೇಶ ರ್ಜಗಿಮಠ, ಸತೀಶ ತಡಸಲೂರ, ವೀರಶೈವ ಲಿಂಗಾಯತ ಯುವ ವೇದಿಕೆ, ಮಾಜಿ ಸೈನಿಕರ ಸಮನ್ವಯ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ