ಪ್ರತಿ ಟನ್ ಕಬ್ಬಿಗೆೆ ಕನಿಷ್ಠ 4 ಸಾವಿರ ರೂ. ನಿಗದಿ ಪಡಿಸಲು ಒತ್ತಾಯ
ಇಂಡಿ 29: ಜಿಲ್ಲಾದ್ಯಂತ ಅತಿವೃಷ್ಠಿಯಿಂದ ರೈತರ ಎಲ್ಲ ಬೆಳೆಗಳು ಹಾನಿಯಾಗಿದ್ದು ಕಬ್ಬು ಮಾತ್ರ ಉಳಿದುಕೊಂಡಿದೆ. ಆ ಕಬ್ಬಿಗಾದರೂ ಸಕ್ಕರೆ ಕಾಖರ್ಾನೆಯವರು ಕನಿಷ್ಠ ನಾಲ್ಕು ಸಾವಿರ ರೂಪಾಯಿ ಬೆಲೆ ನಿಗದಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಬಿಜೆಪಿ ರಾಜ್ಯ ಓಬಿಸಿ ಮೋಚರ್ಾ ಕಾರ್ಯಕಾರಿಣಿ ಸದಸ್ಯರ ಶೀಲವಂತ ಉಮರಾಣಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಲವು ರಾಜಕಾರಣಿಗಳ ಸಕ್ಕರೆ ಕಾಖರ್ಾನೆಗಳೇ ಇವೆ. ಕೇವಲ ರೈತರಿಗೆ ಅನುವು ಮಾಡಿಕೊಡುತ್ತೇವೆ ಎಂದು ಭಾಷಣದಲ್ಲಿ ಹೇಳುವುದಲ್ಲ. ನೈಜವಾಗಿಯೂ ರೈತರ ಬೆನ್ನಿಗೆ ನಿಲ್ಲಬೇಕಾದರೆ ಕಬ್ಬಿಗೆ ಪ್ರತೀ ಟನ್ಗೆ ಕನಿಷ್ಠ 4 ಸಾವಿರ ರೂಪಾಯಿ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟ ನಿವಾರಣೆ ಮಾಡಲು ಆಗದಿದ್ದರೂ ಕನಿಷ್ಠ ಅವರ ಸಹಾಯಕ್ಕಾದರೂ ಹೋಗಬೇಕು ಎಂದರು.