ಯರಗಟ್ಟಿ

ಸವದತ್ತಿ ಮತಕ್ಷೇತ್ರ ಶಾಸಕ ಮಾಮನಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಸವದತ್ತಿ ಮತಕ್ಷೇತ್ರ ಶಾಸಕ ಮಾಮನಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಶಾಸಕ ಆನಂದ ಮಾಮನಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಪಕ್ಷಾತೀತವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸ

ಯರಗಟ್ಟಿ 02 : ರಾಜ್ಯದಲ್ಲಿ ಎಷ್ಟೋ ಸರ್ಕಾರಗಳು ಬಂದವು ಹೋದವು ಕಾಂಗ್ರೇಸ್, ಬಿಜೆಪಿ, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳಾಗಿ ಸವದತ್ತಿ ಮತಕ್ಷೇತ್ರಕ್ಕೆ ಸಾಕಷ್ಟು ಜನ ಶಾಸಕರಾದರೂ ಸಚಿವ ಸ್ಥಾನ ಇಲ್ಲಿಯ ವರೆಗೂ ದೊರೆತಿಲ್ಲ. ಎಲ್ಲ ಪಕ್ಷಗಳು ಯಾರೊಬ್ಬರಿಗೂ ಸಚಿವ ಸ್ಥಾನ ನೀಡದೆ ಅನ್ಯಾಯ ಎಸಗಿವೆ ಈ ಬಾರಿಯಾದರೂ ಸವದತ್ತಿ ಮತಕ್ಷೇತ್ರ ಶಾಸಕ ಆನಂದ ಮಾಮನಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಕ್ಷೇತ್ರದ ಜನತೆ ಪಕ್ಷಾತೀತವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು. 

ಇಲ್ಲಿನ ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ ಅವರ ಕಛೇರಿಯಿಂದ ಪಾದಯಾತ್ರೆ ಮೂಲಕ ಆಗಮಿಸಿ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಎಪಿಎಮ್‌ಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ ಯಲ್ಲಮ್ಮ ಮತ ಕ್ಷೇತ್ರದಿಂದ ಸತತ ಮೂರು ಬಾರಿ ಆಯ್ಕೆಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ವಿಧಾನ ಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಸಾಕಷ್ಟು ಅನುಭವ ಇರುವ ಆನಂದ ಮಾಮನಿ ಅವರಿಗೆ ಯಾವ ಖಾತೆ ಕೊಟ್ಟರೂ ನಿಭಾಯಿಸಬಲ್ಲರು ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಬೆಂಗಳೂರ ಚಲೋ ಪ್ರತಿಭಟನೆ ಮಾಡಲಾಗುವುದು ಎಂದರು.  

ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ತಾ.ಪಂ.ಅಧ್ಯಕ್ಷ ವಿನಯಕುಮಾರ ದೇಸಾಯಿ, ರಾಜೇಂದ್ರಗೌಡ ಪಾಟೀಲ, ಎಮ್‌.ಎಫ್‌.ಮದ್ದಾನಿ, ಮಹಾಂತೇಶ ಜಕಾತಿ,  ಗೌಡಪ್ಪ ಸವದತ್ತಿ, ವೆಂಕಟೇಶ ದೇವರಡ್ಡಿ, ವಿಠ್ಠಲ ಬಂಟನೂರ, ಚಂದ್ರು ಅಳಗೋಡಿ, ರಾಜೇಂದ್ರ ವಾಲಿ, ಸದಾನಂದ ಪಾಟೀಲ, ಈರಣ್ಣ ಚಳಕೊಪ್ಪ, ಮಹಾಂತೇಶ ಕಾಶನ್ನವರ, ಶಿವುಕುಮಾರ ಜಕಾತಿ, ಸತ್ತಿಗೇರಿ, ಅಕ್ಕಿಸಾಗರ, ಮುಗಳಿಹಾಳ, ಗುಡಮಕೇರಿ, ಕೋಟೂರ-ಶಿವಾಪೂರ, ಸೊಪ್ಪಡ್ಲ, ಬೆಣಕಟ್ಟಿ, ರೈನಾಪೂರ, ಯರಝರ್ವಿ  

ಸೇರಿದಂತೆ ಯರಗಟ್ಟಿ ತಾಲೂಕಿನ ವಿವಿಧ ಗ್ರಾಮಸ್ಥರು ಉಪಸ್ಥಿತರಿದ್ದರು. 

ಸುದ್ದಿ ಓದಿ