ಪ್ರತಿ ತಾಲೂಕಾ ಕೇಂದ್ರಕ್ಕೆ ಕನ್ನಡ ಭವನ ನಿರ್ಮಾಣ: ಮುಲಾಲಿ
ಲೋಕದರ್ಶನ ವರದಿ
ಯರಗಟ್ಟಿ 02: ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ವಿಜೇತನಾದರೆ ಪ್ರತಿ ತಾಲೂಕಾ ಕೇಂದ್ರಕ್ಕೆ ಕನ್ನಡ ಭವನ ನಿರ್ಮಿಸಲಾಗುವುದು ಎಂದು ಕಸಾಪ ರಾಜ್ಯಾಧ್ಯಕ್ಷ ಅಭ್ಯರ್ಥಿ ರಾಜಶೇಖರ ಮುಲಾಲಿ ಹೇಳಿದರು.
ಪಟ್ಟಣದ ಹೊಟೇಲ ರತ್ನ ಸಂಗಮ ಸಭಾ ಬವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಭ್ರಷ್ಟಾಚಾರ ಮುಕ್ತ ಕಸಾಪ ನಿರ್ಮಾಣ, ರಾಜ್ಯಮಟ್ಟದ ಕಸಾಪ ಮಹಿಳಾ ಘಟಕ, ಸ್ಥಾಪಣೆ, ಸದಸ್ಯರಿಗೆ ಸ್ಮಾರ್ಟ್ಕಾರ್ಡ್, ಗಡಿ ಬಾಗಗಳ ಹಾಗೂ ಏಕಿಕರಣಕ್ಕಾಗಿ ಹೋರಾಡಿದ ಹುತಾತ್ಮರ ಸ್ಮರಣೆಯಲ್ಲಿ ಕಿರು ಪುಸ್ತಕ ಮಾಲೆ ಪ್ರಾರಂಬಿಸುವುದು ಹೀಗೆ ಹಲವಾರು ಕನ್ನಡ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಸಂತೋಷ ಹಾದಿಮನಿ, ರಪೀಕ್.ಡಿ.ಕೆ, ರಾಜು ಸೊಗಲ, ಮುತ್ತು ದೇವರಡ್ಡಿ, ಕೊಟ್ರೇಶ ಮುಂತಾದವರಿದ್ದರು.