ಕಾಂಗ್ರೆಸ್ ಪಕ್ಷ ನಾಡಿನ ಜನರ ವಿರೋಧಿಯಾಗಿದೆ: ಅಕ್ಕಲಕೋಟ
ಇಂಡಿ: ನಾಡಿನ ಅಭಿವೃಧ್ಧಿಯ ಬಗ್ಗೆ ಚರ್ಚಿಸಲು ವೇದಿಕೆಯಾಗಿರುವ ವಿಧಾನಸಭೆ ಅಧಿವೇಶನವನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿ ಕೊಟ್ಟಿರುವ ಕಾಂಗ್ರೆಸ್ ಪಕ್ಷ ನಾಡಿನ ಜನರ ವಿರೋಧಿಯಾಗಿದೆ ಎಂದು ಬೆಳಗಾವಿ ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದರು.
ಅವರು ಗುರುವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಲಯದಲ್ಲಿ ಆಯೋಜಿಸಿದ ಕಾಂಗ್ರೆಸ್ ಪಕ್ಷದ ನೀತಿ ಖಂಡಿಸಿ ಜನಜಾಗೃತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಂಗೇಸ್ ಪಕ್ಷದ ಶಾಸಕರು ವಿಧಾನಸಭೆ ಕಲಾಪಗಳನ್ನು ಹಾಳುಮಾಡಿದ್ದಾರೆ. ಹಿಜಾಬ್ ಮತ್ತು ಸಮವಸ್ತ್ರ ವಿಷಯದಲ್ಲಿ ಕಾಂಗ್ರೇಸ ಪಕ್ಷದಿಂದ ಗೊಂದಲ ನಿಲುವಿನಿಂದ ಆಗಿರುವ ಹಾನಿ ಸರಿಪಡಿಸಿಕೊಳ್ಳಲು ಜನರ ಗಮನವನ್ನು ಬೇರೆಕಡೆಗೆ ಸೆಳೆಯುವ ಸ್ವಾರ್ಥ ಹುನ್ನಾರಕ್ಕಾಗಿ ರಾಜ್ಯದ ಮಹತ್ವದ ಅಧಿವೇಶನವನ್ನು ವ್ಯರ್ಥ ಮಾಡಿರುವ ಕಾಂಗ್ರೇಸ ಪಕ್ಷ ರಾಜ್ಯದ ಜನತೆಗೆ ಆಗಿರುವ ದ್ರೋಹವೇ ಸರಿ ಎಂದರು.
ಹುಬ್ಬಳ್ಳಿಯಲ್ಲಿ ರಾಷ್ಟ್ರದ ಧ್ವಜ ಹಾರಿಸಲು ಅವಕಾಶ ನೀಡದ ಆಗಿನ ಕಾಂಗ್ರೇಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ಮೇಲೆ ಬರ್ಬರ ಗೋಲಿಬಾರ್ ನಡೆಸಿತ್ತು. ಇಂದು ರಾಷ್ಟ್ರದಧ್ವಜದ ಬಗ್ಗೆ ಅತಿ ಗೌರವ ನಾಟಕ ಆಡುತ್ತಿದೆ. ವಿಧಾನಸೌಧದ ಅಂಗಳದಲ್ಲಿ ಹಗಲು-ರಾತ್ರಿ ಧರಣಿ ನಡೆಸಿ ಕೊನೆಗೆ ಅದರಲ್ಲಿ ಏನುಲಾಭವಾಗುತ್ತಿಲ್ಲ ಎನ್ನುವುದರ ಅನುಭವವಾಗಿ ಕೊನೆಗೆ ಸ್ಪೀಕರ್ ಅವರು ವಿಧನಸಭಾ ಅಧಿವೇಶನವನ್ನು ಮುಂದೂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಚಿದಾನಂದ ಚಲವಾದಿ, ದಯಸಾಗರ ಪಾಟೀಲ, ಕಾಸುಗೌಡ ಬಿರಾದಾರ, ಶಿಲವಂತ ಉಮರಾಣಿ, ಮುತ್ತು ದೇಸಾಯಿ, ಸಿದ್ದಲಿಂಗ್ ಹಂಜಗಿ, ಹಣಮಂತರಾಯಗೌಡ ಪಾಟೀಲ, ಶ್ರೀಶೈಲ ಬಿರಾದಾರ, ಯಲ್ಲಪ್ಪ ಹದರಿ, ಸೋಮು ನಿಂಬರಗಿಮಠ, ರಾಜಶೇಖರ್ ಯರಗಲ್ ಸೇರಿದಂತೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.