ಕಾಂಗ್ರೆಸ್ ಎಲ್ಲ ಸಮುದಾಯದವರಿಗೆ ಜನಪರ ಯೋಜನೆ: ಪಾಟೀಲ
ಇಂಡಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ ವರ್ಗಗಳಿಗೆ ಜನಪರ ಯೋಜನೆಗಳನ್ನು ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯುವುವಲ್ಲಿ ಈ ಚುನಾವಣೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಶುಕ್ರವಾರ ತಾಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜರ ಮಠದಲ್ಲಿ ಇಂಡಿ ವಿಧಾನಸಭಾ ಮತಕೇತ್ರದ ಸಾರ್ವತ್ರಿಕ ಚುನಾವಣೆಯ ಕಾಂಗ್ರೇಸ್ ಪಕ್ಷದ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದರು.
2013ರಲ್ಲಿ ಸಿದ್ದರಾಮಯ್ಯ ಸರಕಾರ ನೀಡಿದ 169 ಭರವಸೆಯಲ್ಲಿ 168 ಭರವಸೆ ಈಡೇರಿಸಿದೆ. 5 ವರ್ಷದ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಿದ್ದೇವೆ. ಆದರೆ, ಬಿಜೆಪಿ ಸರಕಾರ ಅಭಿವೃದ್ದಿಯಲ್ಲಿ ಹಿಂದುಳಿದಿದೆ ಎಂದರು. ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ಗ್ರಾಮಗಳ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನನಗೆ ಮತ ನೀಡಿ ಹೆಚ್ಚಿನ ಅಂತರದಿಂದ ಗೆಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸರಕಾರ ಜಾತಿ-ಜಾತಿಗಳಿಗೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಚುನಾವಣೆ ಹತ್ತಿರದಲ್ಲಿ ಮುಸ್ಲಿಂ, ಲಮಾಣಿ ಸಮುದಾಯದವರಿಗೆ ಮೀಸಲಾತಿ ಗೊಂದಲ ಉಂಟುಮಾಡಿದೆ. ಒಂದು ಸಮುದಾಯದವರಿಗೆ ಒಳ್ಳೆಯದು ಮಾಡುವ ಸಲುವಾಗಿ ಇನ್ನೊಂದು ಸಮುದಾಯದವರಿಗೆ ಅನ್ಯಾಯ ಮಾಡುತ್ತಿರುವ ಯಾವ ನ್ಯಾಯ ? ಎಂದು ಬಿಜೆಪಿ ಸರಕಾರಕ್ಕೆ ಪ್ರಶ್ನೆಸಿದರು.
ಎಂ.ಆರ್. ಪಾಟೀಲ, ಜಟ್ಟೆಪ್ಪ ರವಳಿ, ಧರ್ಮರಾಜ ವಾಲಿಕಾರ, ಇಲಿಯಾಸ್ ಬೋರಾಮಣಿ, ಗುರಣಗೌಡ ಪಾಟೀಲ, ಮುತ್ತಪ್ಪ ಪೋತೆ, ಬಿ.ಎಂ.ಕೋರೆ, ಮಂಜುನಾಥ ಕಾಮಗೊಂಡ, ಸಂಜು ಚವ್ಹಾಣ, ಶಿವು ನಿಂಬಾಳ, ಮಹಾದೇವ ಮುಜಗೊಂಡ, ತಮ್ಮಣ ಪೂಜಾರಿ, ಚಂದ್ರಶೇಖರ ಪಾಸೋಡೆ, ನಿರ್ಮಾಲಾ ತಳಕೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಠ್ಠಲ ಕರಾಳೆ, ಎಂ.ಜಿ. ಕಾರಕಲ, ಜಾವೇದ ಮೋಮಿನ, ಅಣ್ಣಾರಾಯ ಬಿದರಕೊಟಿ, ಸೋಮು ಮ್ಯಾಕೆರಿ, ಪ್ರಶಾಂತ ಕಾಳೆ, ಮಲ್ಲು ಮಡ್ಡಿಮನಿ, ಹುಚ್ಚಪ್ಪ ತಳವಾರ, ಅವಿನಾಶ ಬಗಲಿ, ರಮೇಶ ಧಯಗೊಡೆ, ಮಲಕ್ಕಣ ಗುಬ್ಬೇವಾಡ, ರಾಜು ನದಾಪ, ಚಂದ್ರಶೇಖರ ರೂಗಿ, ಕಾಮಣ ದಶವಂತ, ಸತ್ತಾರ ಬಾಗವಾನ, ಸಣ್ಣಪ್ಪ ತಳವಾರ, ರಾಜು ಪತಂಗೆ, ಪ್ರಭುಗೌಡ ಬಿರಾದಾರ, ಅರವಿಂದ ಕರಾಳೆ, ಹಣಮಂತ ಕೋಡತೆ, ಅಪ್ಪು ಕಲ್ಲೂರ, ಕಲ್ಲನಗೌಡ ಬಿರಾದಾರ, ಶಂಕರ ಹೋನವಾಡ, ಜಿ.ಪಿ. ಮುಜಗೊಂಡ, ಹಣಮಂತ ಖಡಖಡೆ, ಮಹಾದೇವ ಬಿರಾದಾರ, ವಿಶ್ವನಾಥ ಬಿರಾದಾರ, ಶ್ರೀಕಾಂತ ಕೂಡಿಗನೂರ, ಎಂ.ಎಂ. ಮುಜಗೊಂಡ, ಜಿತೇಪ್ಪ ಕಲ್ಯಾಣಿ, ಮಹಾದೇವ ಪೂಜಾರಿ, ಸಿದ್ದಣಗೌಡ ಬಿರಾದಾರ ಸೇರಿದಂತೆ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಇದ್ದರು