ಇಂಡಿ

ಕಾಂಗ್ರೆಸ್ ಹಿಂದೂ, ಜನವಿರೋದಿಯಾಗಿದೆ: ಹಿರೇಮನಿ

ಕಾಂಗ್ರೆಸ್ ಹಿಂದೂ, ಜನವಿರೋದಿಯಾಗಿದೆ: ಹಿರೇಮನಿ


ಇಂಡಿ: ಮಂಗಳೂರಿನಲ್ಲಿ ಪ್ರಾರಂಭಗೊಂಡ ಹಿಜಾಬ್ ವಿವಾದ ಹಿಡಿದು ಶಿವಮೊಗ್ಗದ ಹಿಂದೂ ಯುವಕ ಹರ್ಷನ ಕೊಲೆ ಕೇಸನ್ನು ಬೇರೆಡೆ ಸೆಳೆಯಲು ಅಧಿವೇಶನದಲ್ಲಿ ಸಚಿವ ಈಶ್ವರ​‍್ಪನವರ ಕೇಸರಿ ಬಾವುಟದ ಹೇಳಿಕೆ ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಧರಣಿ ಇಳಿಯುವುದಲ್ಲದೆ, ಅಂತಾಕ್ಷರಿ ಹಾಡು ಹಾಡುತ್ತ, ಮೋಜು ಮಸ್ತಿ ಮಾಡುವ ಕಾಂಗ್ರೆಸ್ ಹಿಂದೂ ವಿರೋಧಿ ಮತ್ತು ಜನವಿರೋಧಿಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಹಿರೇಮನಿ ಹೇಳಿದರು. 

ಅವರು ಭಾನುವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಲಯದಲ್ಲಿ ಕಾಂಗ್ರೇಸ್ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. 

ಕಾಂಗ್ರೇಸ್ ಪಕ್ಷದ ಕುಮ್ಮಕ್ಕಿನಿಂದ ಮಂಗಳೂರಿನ ಆರು ಜನ ವಿದ್ಯಾರ್ಥಿನಿಯರು ಹಿಜಾಬ್ ಎಂಬ ಶಬ್ದವನ್ನು ಉದ್ಭವಿಸಿ ದೇಶದಲ್ಲಿ ತಲ್ಲಣ ಉಂಟು ಮಾಡಿದ್ದಾರೆ. 

ನಾವು ನಾಡಿನಲ್ಲಿ ಹಿಂದೂ-ಮುಸ್ಲೀಂ ಭಾಯಿ, ಭಾಯಿ ಎಂದು ಬದುಕುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಕಾರಣ ಮುಂದೆ ತಾವು ಅಧಿಕಾರ ಹಿಡಿಯಬೇಕೆಂಬ ಆಸೆಗಾಗಿ ಹಿಜಾಬ್ ಮುಂದೆ ಮಾಡಿದ್ದಾರೆ ಎಂದರು. 

ಭಾರತದಲ್ಲಿ ಗ್ರಾಮ ಪಂಚಾಯತ್ ಸದಸ್ಯನಿಂದ ರಾಷ್ಟ್ರಪತಿಯವರೆಗೆ ಮುಸ್ಲೀಂ ಜನಾಂಗದವರಿಗೆ ಅಧಿಕಾರ ನೀಡಲಾಗಿದೆ. ಆದರೆ ವಿಶ್ವದ ಯಾವೊಂದು ದೇಶದಲ್ಲೂ ಹಿಂದೂಗಳಿಗೆ ಸ್ಥಾನಮಾನ ಸಿಕ್ಕಿಲ್ಲ, ನಮ್ಮದು ಪ್ರಜಾಪ್ರಭುತ್ವ ದೇಶ ಎಂದ ಅವರು ಕಾಂಗ್ರೇಸ್ ನಾಯಕರ ರಾಜಕೀಯ ನಾಟಕಕ್ಕೆ ಬಲಿಯಾಗದೆ ಹಿಜಾಬ್ ವಿವಾದ್ ಛೋಡೋ ಕಿತಾಬ್ ಪಕಡೋ ಎಂದು ಮನವಿ ಮಾಡುತ್ತೇವೆ ಎಂದರು. 

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಕಾಸುಗೌಡ ಬಿರಾದಾರ, ದಯಸಾಗರ ಪಾಟೀಲ, ಕಾಸುಗೌಡ ಬಿರಾದಾರ, ಅನೀಲ ಜಮಾದಾರ, ಶೀಲವಂತ ಉಮರಾಣಿ, ಸಿದ್ದಲಿಂಗ ಹಂಜಗಿ, ಹಣಮಂತರಾಯಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ ಮಾತನಾಡಿ ಜನರ ಸಮಸ್ಯೆಗಳ ಚರ್ಚೆ ಮಾಡಬೇಕಾದ ವಿರೋಧ ಪಕ್ಷದ ಕಾಂಗ್ರೆಸ್ ನಾಯಕರು ಅನಗತ್ಯ ಆರೋಪಗಳ ಮೂಲಕ ಅಧಿವೇಶನದ ಸಮಯ ವ್ಯರ್ಥ ಮಾಡಿ ನಾಡಿನ ಜನರಿಗೆ ಮೋಸ ಮಾಡಿದ್ದಾರೆ. ಭಾರತ ದೇಶ ನಿಮಾಣವಾಗಿದ್ದೇ ಹಿದುತ್ವದ ಮೇಲೆ. ರಾಜ್ಯದಲ್ಲಿ ಹಿಜಾಬ್ ವಿವಾದ ಹೆಚ್ಚಾಗಲು ಕಾಂಗ್ರೆಸ್ ಕಾರಣ, ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ಸಚಿವ ಈಶ್ವರ​‍್ಪ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರು ಡೊಂಬರಾಟ ನಡೆಸಿದ್ದಾರೆ. ಹರ್ಷ ಹತ್ಯೆ ಖಂಡಿಸಬೇಕಾದ ನಾಯಕರು ಈಶ್ವರ​‍್ಪ ಕೊಲೆ ಮಾಡಿಸಿದ್ದಾರೆಂಬ ಆರೊಪ ಮಾಡಿ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದರು. 

ಚಿದಾನಂದ ಚಲವಾದಿ, ಭೀಮಸಿಂಗ್ ರಾಠೋಡ, ರಾಜಕುಮಾರ ಸಗಾಯಿ, ರವಿ ವಗ್ಗೆ, ಗುರದೇವಿ ತರಡಿ, ವಿಜಯಕುಮಾರ ಮೂರಮನ, ಶ್ರೀನಿವಾಸ ಕಂದಗಲ, ಸಂಜು ದಶವಂತ, ಶಾಂತು ಕಂಬಾರ, ಕಾಶೀನಾಥ ನಾಯ್ಕೋಡಿ, ಅಶೋಕಗೌಡ ಬಿರಾದಾರ, ಸೋಮು ನಿಂಬರಗಿಮಠ, ರಾಜಶೇಖರ್ ಯರಗಲ್, ಭೌರಮ್ಮ ಮುಳಜಿ, ಅನಸೂಯಾ ಮದರಿ, ಸುನಂದಾ ಗಿರಣಿವಡ್ಡರ, ವಿಜಯಲಕ್ಷ್ಮಿ ರೂಗಿಮಠ ಸೇರಿದಂತೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. 


ಸುದ್ದಿ ಓದಿ