ಯರಗಟ್ಟಿ

ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಕಾಂಗ್ರೆಸ್ ಅನ್ಯಾಯ ಮಾಡಿದೆ - ಲಖನ್ ಜಾರಕಿಹೊಳಿ ಆರೋಪ

ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಕಾಂಗ್ರೆಸ್ ಅನ್ಯಾಯ ಮಾಡಿದೆ - ಲಖನ್ ಜಾರಕಿಹೊಳಿ ಆರೋಪ

ಯರಗಟ್ಟಿ 08: ಜಿಲ್ಲೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿದ ಹಿರಿಯರನ್ನು ಕಡೆಗಣಿಸಿ ನಿನ್ನೆಮೊನ್ನೆ ಬಂದವರಿಗೆ ಟಿಕೇಟ್ ನೀಡಿ ಕಾಂಗ್ರೇಸ್ ಪಕ್ಷ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅನ್ಯಾಯ ಮಾಡಿದೆ ಈ ಚುನಾವಣೆಯಲ್ಲಿ ಪಕ್ಷಕ್ಕೆ ಬುದ್ಧಿ ಕಲಿಸಬೇಕು ಎಂದು ವಿಧಾನ ಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿ ಲಕಣ್ಣ ಜಾರಕಿಹೊಳಿ ಹೇಳಿದರು. 

ಪಟ್ಟಣದ ಖಾಸಗಿ ಹೊಟೇಲನಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಗ್ರಾ.ಪಂ.ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಾ ಬೆಂಗಳೂರ ಮತ್ತು ಬೆಳಗಾವಿ ಲೀಡರಿಂದ ಕಾಂಗ್ರೇಸ್ ಪಕ್ಷ ವಿನಾಶದ ಅಂಚಿನೆಡೆಗೆ ಹೋಗುತ್ತಿದೆ. ವಿಧಾನ ಪರಿಷತ್ ಸದಸ್ಯ ವಿವೇವಕರಾವ್ ಪಾಟೀಲ ಹಾಗೂ ರಮೇಶ ಜಾರಕಿಹೊಳಿ ಜೋಡೆತ್ತು ಇದ್ದಂತೆ ಮುಂದಿನ ದಿನಗಳಲ್ಲಿ ವಿವೇಕರಾವ್ ಮತ್ತೆ ಅಧಿಕಾರದಲ್ಲಿರಲಿದ್ದಾರೆ ಎಂದರು. 

 ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಮಾತನಾಡಿ ಸುಮಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಆದೇಶಗಳಿಗೆ ತಲೆಬಾಗಿ ಕೆಲಸಕಾರ್ಯಗಳನ್ನು ಮಾಡುತ್ತಾ ಬಂದಿದ್ದರೂ ಕಾಂಗ್ರೇಸ್ ಪಕ್ಷದ ಮುಖಂಡರು ನಾನು ಕಾಂಗ್ರೇಸ್ ಪಕ್ಷದವನಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು. 

ಈ ಸಂಧರ್ಭದಲ್ಲಿ ಮಡ್ಡೆಪ್ಪ ತೋಳಿನವರ, ಮುದಕಪ್ಪ ಕಂಬಳಿ, ಸಂತೋಷ ಹಾದಿಮನಿ, ಎಸ್‌.ಎಸ್‌.ಮುಗಳಿ, ಅಮೀರ ಗೋರಿನಾಯ್ಕ, ಮುತ್ತೆಪ್ಪ ಕುಳ್ಳೂರ, ಟಿ.ಆರ್‌.ಕಾಗಲ್, ಶಂಕರ ಇಟ್ನಾಳ, ರತ್ನಾಕರ ಶೆಟ್ಟಿ, ದೇವಪ್ಪ ದಳವಾಯಿ, ಸದಾನಂದ ಆಳಜ, ಸಿದ್ದಪ್ಪ ಬೆಣ್ಣಿ, ಸಿದ್ದಪ್ಪ ಮಬನೂರ, ಡಿ.ಕೆ.ರಪೀಕ್, ಸಿದ್ದು ದಳವಾಯಿ, ಉಮೇಶ ಗೌಡರ, ಆಶೀಪ್ ಬಾಗೋಜಿ, ಯರಗಟ್ಟಿ, ಸವದತ್ತಿ ತಾಲೂಕಿನ ನೂರಾರು ಗ್ರಾಮ ಪಂಚಾಯತ ಸದಸ್ಯರು ಹಾಗೂ ಜಾರಕಿಹೊಳಿ ಅಭಿಮಾನಿಗಳು ಬಾಗವಹಿಸಿದ್ದರು. 


ಸುದ್ದಿ ಓದಿ