ಇಂಡಿ

ಗುತ್ತಿ ಬಸವಣ್ಣ ಹೋರಾಟ ಸಮಿತಿಯಿಂದ ಸಚಿವ ಉಮೇಶ ಕತ್ತಿಗೆ ಸಂತಾಪ

ಗುತ್ತಿ ಬಸವಣ್ಣ ಹೋರಾಟ ಸಮಿತಿಯಿಂದ ಸಚಿವ ಉಮೇಶ ಕತ್ತಿಗೆ ಸಂತಾಪ
ಇಂಡಿ: ತಾಲೂಕಿನ ತಾಂಬಾ ಗ್ರಾಮದ ಗುತ್ತಿ ಬಸವಣ್ಣ ಹೋರಾಟ ಸ್ಥಳದಲ್ಲಿ ನಡೆದ ಶೃದ್ದಾಂಜಲ್ಲಿಸಿದರು.

ಇಂಡಿ: ತಾಂಬಾದಲ್ಲಿ ಗುತ್ತಿ ಬಸವಣ್ಣ ನೀರಿಗಾಗಿ ನಡೆದ ಹೋರಾಟ ಸ್ಥಳಕ್ಕೆ ಎರಡು ಬಾರಿ ಬಂದು, ರೈತರ ಜೊತೆ ಗುತ್ತಿ ಬಸವಣ್ಣ ಕಾಲುವೆ ವೀಕ್ಷಿಸಿ ಕಾಲುವೆಗೆ ನೀರು ಬಿಡುವ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು ಸಚಿವ ಉಮೇಶ ಕತ್ತಿಯವರು ಎಂದು ಹೋರಾಟ ಸಮಿತಿಯ ಮಲ್ಲಯ್ಯ ಸಾರಂಗಮಠ ಹೇಳಿದರು. 

ಗುಧವಾರ ತಾಲೂಕಿನ ತಾಂಬಾ ಗ್ರಾಮದ ಸಂಗನಬಸವೇಶ್ವರ ವೃತ್ತದಲ್ಲಿ ಗುತ್ತಿ ಬಸವಣ್ಣ ಹೋರಾಟ ಸಮಿತಿಯಿಂದ ಸಚಿವ ಉಮೇಶ ಕತ್ತಿಯವರ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತಿದ್ದರು. 

ಇದೇ ಸ. 9 ರಂದು ವಿಜಯಪೂರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬರುವವರಿದ್ದು ಅಂದು ಮುಖ್ಯಮಂತ್ರಿಗಳ ಜೊತೆ ಹೋರಾಟ ಸಮಿತಿಯವರ ವಿಶೇಷ ಸಭೆ ಏರಿ​‍್ಡಸಿ ಪರಿಹಾರ ನೀಡುವ ತವಕದಲ್ಲಿದ್ದ ಕತ್ತಿಯವರ ಅಕಾಲಿಕ ನಿಧನ ಹೋರಾಟ ಸಮಿತಿಯವರಿಗೆ ತುಂಬಲಾರದ ಹಾನಿಯಾಗಿದೆ ಎಂದರು. 

ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಚಪ್ಪ ಗಳೇದ, ಈರಣ್ಣ ಬ್ಯಾಕೋಡ, ಏಗಪ್ಪ ಹೊರಪೇಟ, ಮಾಸಿಮ ವಾಲಿಕಾರ, ಜಟ್ಟೆಪ್ಪ ಯಳಕೋಟ, ಭೀರಪ್ಪ ವಗ್ಗಿ, ದುಂಡಪ್ಪ ಮುಂಜಿ, ಸಿದ್ದಣ್ಣ ಕಿಣಗಿ, ಚಂದ್ರಾಮ ಮೂಲಿಮನಿ ಮತ್ತಿತರಿದ್ದರು.  

ಸುದ್ದಿ ಓದಿ