ಬೈಲಹೊಂಗಲ

ಹಳೆಯ ವಿದ್ಯಾಥಿಗಳಿಂದ ಪ್ರೌಢಶಾಲೆಯಲ್ಲಿ ಸ್ವಚ್ಛತಾ ಕಾರ್ಯ

ಹಳೆಯ ವಿದ್ಯಾಥಿಗಳಿಂದ ಪ್ರೌಢಶಾಲೆಯಲ್ಲಿ ಸ್ವಚ್ಛತಾ ಕಾರ್ಯ

ಲೋಕದರ್ಶನ ವರದಿ 


ಬೈಲಹೊಂಗಲ 03: ಶತಮಾನ ಪೂರೈಸಿರುವ ಪುರಸಭೆ ಸಂಚಲಿತ ಶೂರ ಸಂಗೊಳ್ಳಿ ರಾಯಣ್ಣ (ಎಂಎಸ್‌ಎಸ್‌ಆರ್) ಪ್ರೌಢಶಾಲೆಯ ಡ್ರಾಮಾ ಮತ್ತು ಜಿಮ್ ಹಾಲ್‌ನ ಛಾವಣಿ ಸ್ವಚ್ಛತಾ ಅಭಿಯಾನ ಕಾರ್ಯ ಯಶಸ್ವಿಯಾಗಿ ನಡೆಯಿತು.  

   ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡ ಶಾಲೆಯ ಹಳೆಯ ವಿದ್ಯಾರ್ಥಿಗಳು ಹುರುಪಿನಿಂದ ಶಾಲೆಯ ಸೇವೆ ಮಾಡಿದರು. 13 ವರ್ಷಗಳಿಂದ ಕಟ್ಟಡದ ಛಾವಣಿಯಲ್ಲಿ ಬೆಳೆದಿದ್ದ ದೊಡ್ಡ ಪ್ರಮಾಣದ ಟೊಂಗೆಗಳು, ಕಸಕಂಟಿಗಳು ಭಯ ಹುಟ್ಟಿಸುವಂತೆ ಆಗಿದ್ದವು. ಪಾಚಿ ಬೆಳೆದು ನಿಂತಿತ್ತು. ಅದನ್ನೆಲ್ಲ ಸ್ವಚ್ಛಗೊಳಿಸಿದ ಯುವಕರ ತಂಡ ಮೂರು ಟ್ರ್ಯಾಕ್ಟರ್‌ದಷ್ಟು ಕಸವನ್ನು ತೆಗೆದರು. 

   ಪುರಸಭೆ ಮುಖ್ಯಾಧಿಕಾರಿ ಕೆ.ಐ.ನಾಗನೂರ, ಸ್ಥಾಯಿ ಸಮಿತಿ ಅಧ್ಯಕ್ಷ ಅರ್ಜುನ ಕಲಕುಟಕರ, ಪುರಸಭೆ ಆಡಳಿತದ ಹಾಗೂ ಮುಖ್ಯಾಧ್ಯಾಪಕ ಎಂ.ವಿ.ನಾಗನೂರ ಅವರುಗಳ ಮಾರ್ಗದರ್ಶನದಲ್ಲಿ ಕಾರ್ಯ ನಡೆಯಿತು.  

   

    ಶಿಕ್ಷಕರಾದ ಎಚ್‌.ಟಿ.ಭಜಂತ್ರಿ, ಬಿ.ಆರ್‌.ಬೋರಗಲ್, ಕಿರಣ ದಂಡಾವತಿಮಠ ನೇತೃತ್ವದಲ್ಲಿ ಕಾರ್ಯ ನಡೆಯಿತು.  

    ನಮಗೆ ಅಕ್ಷರ ಜ್ಞಾನದ ಜತೆಗೆ ನೈತಿಕ ಸಂಸ್ಕಾರ ನೀಡಿದ ಶಾಲೆಯ ಯಾವುದೇ ಕಾರ್ಯಗಳನ್ನು ಮಾಡಲು ಸಿದ್ಧರಿದ್ದೇವೆ ಎಂದು ಹಳೆಯ ವಿದ್ಯಾರ್ಥಿಗಳು ಅಭಿಮಾನದಿಂದ ಹೇಳಿದರು.  

ಸೋಮು ಪಟ್ಟಣಶೆಟ್ಟಿ, ನಿರಂಜನ ಮಂಗಳಗಟ್ಟಿ, ಗಣೇಶ ಹೂಲಿ, ಪ್ರವೀಣ ಪಟಗುಂದಿ, ಸುಶಾಂತ ಕರಿಗಾರ, ದಿಲಾವರ ದೇವಲ್ಲಿ, ಸೋಹಿಲ್ ಮುಗುಟಖಾನ, ದ್ಯಾಮಣ್ಣ ಗೋರಬಾಳ, ಶಿವುಕುಮಾರ ಬೀಸನಕೊಪ್ಪ, ಶಿವುಕುಮಾರ ಪೂಜೇರ, ಅಶೋಕ ಹಾವನ್ನವರ, ಅಬೂಬಕ್ಕರ ಬಂಕಾಪುರ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು. ಶಾಲೆಯ ಮೇಲಿನ ಅಭಿಮಾನವನ್ನು ಬರೀ ಮಾತಿನಲ್ಲಿ ಹೇಳದೆ ಅದನ್ನು ಕಾರ್ಯರೂಪದಲ್ಲಿ ನೆರವೇರಿಸಿರುವುದು ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ