ಚಿಕ್ಕಬೇವನೂರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ: ವಿದ್ಯಾರ್ಥಿಗಳ ಸಾಧನೆ
ಇಂಡಿ 27: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿಕ್ಕಬೇವನೂರ ಎಂಪಿಎಸ್ ಶಾಲೆಯ ವಿದ್ಯಾರ್ಥಿಗಳು ಚಿಕ್ಕಬೇವನೂರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಹಾಗೂ ಕಬಡ್ಡಿಯಲ್ಲಿ ಬಾಲಕಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಲಯದಲ್ಲಿ ಉದ್ದ ಜಿಗಿತ ಹರ್ಷ ವರ್ಧನ್ ಪ್ರಥಮ, ಬಾಲಕಿಯರ ವಲಯದಲ್ಲಿ ಉದ್ದ ಜಿಗಿತ ಅರ್ಿತಾ ಭಂಡಾರಿ ಪ್ರಥಮ ಸ್ಥಾನ, ಚಕ್ರ ಎಸೆತದಲ್ಲಿ ಶ್ರುತಿ ನಾವಿ ದ್ವಿತೀಯ ಸ್ಥಾನ, ಎರಡು ಮೀಟರ್ ಓಟದಲ್ಲಿ ದೀಪಾಲಿ ಅಗಸರ ದ್ವಿತೀಯ ಸ್ಥಾನ, ನೂರು ಮೀಟರ್ ಓಟದಲ್ಲಿ ರಕ್ಷಿತಾ ರೋಡಗಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಮುಖ್ಯ ಗುರು ಎ.ಎ. ಮುಲ್ಲಾ ಹಾಗೂ ಸರೋಜನಿ ಮಾವಿನಮರ, ಶಾಲಾ ಸಿಬ್ಬಂದಿ ವರ್ಷ ವ್ಯಕ್ತಪಡಿಸಿದ್ದಾರೆ.