ರಕ್ತದಾನ ಮಹಾದಾನ, ಜೀವ ಉಳಿಸುವ ಪುಣ್ಯದಾನ
ಸಿಂದಗಿ 26: ಒಂದು ಯುನಿಟ್ ರಕ್ತದಾನ ಮೂರು ಜೀವಗಳಿಗೆ ಜೀವದಾನವಾಗುವುದು. ಆದ್ದರಿಂದ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಜೀವ ಉಳಿಸಿ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ.ಎ ಎ ಮಾಗಿ ಮನವಿ ಮಾಡಿದರು.
ನಗರದ ತಾಲೂಕು ಆಸ್ಪತ್ರೆಯಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಸ್ವತಃ ರಕ್ತದಾನ ಮಾಡುವುದರ ಮುಖಾಂತರ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಹೃದಯ ತೊಂದರೆಗಳನ್ನು ಕಡಿಮೆಗೊಳಿಸುತ್ತದೆ. ರಕ್ತದಾನವು ಅಂಗಾಂಗಳಲ್ಲಿ ಅನವಶ್ಯಕ ಕೊಬ್ಬು ಕ್ರೋಢಿಕರಣ ಆಗುವುದನ್ನು ತಪ್ಪಿಸುತ್ತದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆದ್ದರಿಂದ ಸ್ವಯಂ ಪ್ರೇರಿತ ರಕ್ತದಾನ ಅತ್ಯಂತ ಅಗತ್ಯ ಎಂದರು.
ತಾಲೂಕಾ ಆಯುಷ ವೈದ್ಯಾಧಿಕಾರಿ ಡಾಽಽ ಮಹಾಂತೇಶ ಹಿರೇಮಠ ಮಾತನಾಡಿ ಸಾಮಾನ್ಯವಾಗಿ 18-65 ವರ್ಷದ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಕನಿಷ್ಠ 45ಕೆಜಿ ತೂಕ ಹೊಂದಿರುವವರು, ಹಿಮೋಗ್ಲೋಬಿನ ಮಟ್ಟ ಮತ್ತು ಇತರ ಆರೋಗ್ಯ ಮಾನದಂಡಗಳು ಸರಿಯಾಗಿರಬೇಕು.
ನಮ್ಮ ದೇಹದಿಂದ ಸ್ವಯಂ ಪ್ರೇರಿತವಾಗಿ ನೀಡುವ ರಕ್ತವು ಅಪಘಾತದಲ್ಲಿ ಗಾಯಗೊಂಡವರು, ಶಸ್ತ್ರ ಚಕಿತ್ಸೆಗೆ ಬೇಕಾಗುವುದು. ಹೆರಿಗೆ ಸಂದರ್ಭದಲ್ಲಿ ತುರ್ತು ರಕ್ತದ ಅವಶ್ಯಕತೆ ಇರುವ ತಾಯಂದಿರಿಗೆ, ಥಲಸೀಮಿಯಾ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ ಇಂತಹ ಶಿಬಿರಗಳಿಂದ ನೀಡಿವ ರಕ್ತ ಅನೇಕರಿಗೆ ಅನುಕೂಲವಾಗುತ್ತದೆ ಎಂದು ವಿವರಸಿದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಕುಲಕರ್ಣಿ ಸ್ವಾಗತಿಸಿದರು.
ಹಿರಿಯ ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ರಾಜು ನರಗೋಧಿ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಯವರು ರಕ್ತದಾನ ಮಾಡಿದರು. ಈ ಸಂಧರ್ಭದಲ್ಲಿ ಡಾ. ಶಂಕರ ಧೇಶಮುಖ, ಡಾ. ಮೌನೇಶ ಬಡಿಗೇರ, ರಫಿಕ ಮುಲ್ಲಾ. ವಿರೇಂದ್ರ ಪವಾಡೆ, ರಾಕೇಶ ಹುಗಾರ, ಶಶಿ ಬುಯ್ಯಾರ,
ವಿದ್ಯಾ ಹಿರೇಪಟ್ಟ, ಮಹಾಲಿಂಗ ಫಕೀರಪೂರ, ಗೀತಾ ಸಾಸಾಬಾಳ, ಸಾಯಬಣ್ಣ ಗಣಜಲಖೇಡ, ಮಹಾಂತೇಶ ಬೂದಿ, ಖತೀಜಾ, ನಮ್ಮ ಕ್ಲಿನಿಕನ ವೈದ್ಯಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಆಸ್ಪತ್ರೆಯ ವಿವಿಧ ವೃಂದದ ಅಧಿಕಾರಿ ಸಿಬ್ಬಂದಿಯವರು ಉಪಸ್ಥಿತರಿದ್ದರು.