ಸಿಂಧಗಿ

ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿಬಿರ

ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿಬಿರ

ಲೋಕದರ್ಶನ ವರದಿ 

          ಸಿಂದಗಿ 17 : ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ಸಮಯಪ್ರಜ್ಞೆ, ಸ್ವಚ್ಛತೆ, ಪರಸ್ಪರ ಗೌರವ ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ ಹೇಳಿದರು. 

              ಪಟ್ಟಣದ ಪ.ವಿ.ವ.ಸಂಸ್ಥೆಯ ಆರ್‌.ಡಿ.ಪಾಟೀಲ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ರೋವರ್ ರೇಂಜರ್ ಘಟಕದ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.   

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳ ಅರಿವು ಮೂಡಿಸುವುದು ಇಂತಹ ಶಿಬಿರಗಳ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಅಚ್ಚುಕಟ್ಟಾದ ಸಮವಸ್ತ್ರ ಧರಿಸಿ, ಸಮಯಪಾಲನೆ ಮಾಡುತ್ತಾ ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ ತೋರಬೇಕು.                  ಸಾರ್ವಜನಿಕ ಸ್ಥಳಗಳಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಯಾರಿಗೂ ಉಪದೇಶ ಮಾಡುವ ಅಗತ್ಯವಿಲ್ಲ; ನಮ್ಮ ನಡವಳಿಕೆ, ಶಿಸ್ತು ಮತ್ತು ಸೇವಾ ಮನೋಭಾವವೇ ಇತರರಿಗೆ ಮಾದರಿಯಾಗಬೇಕು. ನಮ್ಮನ್ನು ನೋಡಿ ಇತರರು ತಮ್ಮನ್ನು ತಾವು ತಿದ್ದಿಕೊಳ್ಳುವಂತಾಗಬೇಕು. ಅದುವೇ ನಿಜವಾದ ವ್ಯಕ್ತಿತ್ವದ ಗೆಲುವು ಎಂದರು. 

ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ನೋಡಲ್ ಅಧಿಕಾರಿ ಡಿ.ಎ.ಅತ್ತಾರ, ಅಧಿಕಾರಿ ಶಿವಯೋಗಿ ತಾಳಿಕೋಟಿ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಸಮಾಜದ ಒಳಿತಿಗಾಗಿ ಶ್ರಮಿಸುವ ಮನೋಭಾವ ಬೆಳೆಸಿಕೊಂಡು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದೇ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಘಟನೆಯ ಮೂಲ ಆಶಯವಾಗಿದೆ ಎಂದರು.  

ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ನಿಪುಣ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಉಪಪ್ರಾಚಾರ್ಯ ಪಿ.ವಿ.ಮಹಲಿನಮಠ, ಎನ್‌.ಬಿ.ಪೂಜಾರಿ, ಡಾ.ಎಸ್‌.ಸಿ.ಜೋಗೂರ, ಎಸ್‌.ಆರ್‌.ಬೂದಿಹಾಳ, ಎಸ್‌.ಎಚ್‌.ಜಾಧವ, ಬಿ.ಬಿ.ಜಮಾದಾರ, ವ್ಹಿ.ಪಿ.ನಂದಿಕೋಲ, ವ್ಹಿ.ಕೆ.ಹಿರೇಮಠ, ಎಂ.ಐ.ಮುಜಾವರ್, ಎನ್‌.ಎಂ.ಶೆಳ್ಳಗಿ, ರೋಹಿತ್ ಸುಲ್ಪಿ, ಸುನೀಲ ಪಾಟೀಲ, ಶಿವರಾಜ ಕುಂದಗೋಳ, ಪ್ರಸನ್ ಜೋಗೂರ, ರಾಹುಲ ನಾರಾಯಣಕರ್, ಎಸ್‌.ಜಿ.ಮಾರ್ಸನಳ್ಳಿ, ಉದಯ ಶಿವಸಿಂಪಿ, ನೀಲಕಂಠ ಮೇತ್ರಿ, ಶ್ರೀದೇವಿ ತಳವಾರ, ರಾಧಿಕಾ, ಸೃಷ್ಠಿ, ಸುಮಿತ್ರಾ ಕರನಾಳ, ಭಾಗ್ಯಮ್ಮ ಕೋರಿ, ದೊಡ್ಡಯ್ಯ ಸ್ಥಾವರಮಠ, ಶೋಭಾ ಶಂಭೇವಾಡ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ