ವಿಜಯಪುರ ಜಿಲ್ಲೆಗೆ 371(ಜೆ) ಸ್ಥಾನಮಾನ ನೀಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಲೋಕದರ್ಶನ ವರದಿ
ಸಿಂದಗಿ 17 : 371(ಜೆ) ಬಿಟ್ಟು ಹೋದ ಈ ಜಿಲ್ಲೆಯ ಹೆಸರನ್ನು ಮರು ಪರೀಶೀಲನೆಗೆ ಒಳಪಡಿಸಲು ಹೋರಾಟ ಸಮಿತಿ 45 ದಿನಗಳಿಂದ ಧರಣಿ ನಡೆಸುತ್ತಿದೆ ಆದರೆ ಸರಕಾರದಲ್ಲಿ ಆಳುವ ರಾಜಕಾರಣಿಗಳಿಗೆ ಕೀವಿಯಿದ್ದರು ಕೀವುಡಾಗಿರುವುದು ಜಾನುವಾರುಗಳು ನಾಚಿಕೆ ಪಟ್ಟು ವೇದಿಕೆ ಕಡೆ ತಿರುಗಿ ನೋಡುವಂತಾಗಿದ್ದು ಖೇದಕರ ಎಂದು ಆಲಮೇಲ ವೀರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಆಪಾದಿಸಿದರು.
ನಗರದ ಬಸವೇಶ್ವರ ಸರ್ಕಲ್ ಹತ್ತಿರ ಗೋಕಾಕ ಚಳವಳಿಯ ರೂವಾರಿ ರೇ.ಚ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ 45 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, 2002ರಲ್ಲಿ ರಚಿತವಾದ ಡಾ. ಡಿ.ಎಂ.ನಂಜುಂಡಪ್ಪ ವರದಿ ಯಲ್ಲಿ ಸಿಂದಗಿ, ಇಂಡಿ, ಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳು ದಾಖಲಿದ್ದರು ಕೂಡಾ 2013ರಲ್ಲಿ ಹೈದ್ರಾಬಾದ ಕರ್ನಾಟಕದ 6 ಜಿಲ್ಲೆಗಳಿಗೆ ಜಾರಿ ಮಾಡುವ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯನ್ನು ಕೈಬಿಟ್ಟಿರುವುದನ್ನು ಮರು ಪರೀಶೀಲನೆ ಮಾಡಿ ಈ ಜಿಲ್ಲೆಗೂ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಜಾನಪದ ವಿದ್ವಾಂಸ ಡಾ. ಎಂ.ಎಂ.ಪಡಶೆಟಿ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆಯು ಸಾವಿರಾರು ಎಕರೆ ಜಮೀನು ಕಲೇದುಕೊಂಡು ಹೈದ್ರಾಬಾದ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸಿಕೊಟ್ಟು ನಾವು ನೀರಾವರಿಯಿಂದ ವಂಚಿತರಾಗಿದ್ದೇವೆ ಅಲ್ಲದೆ ರಜಾರಕರ ಹಾವಳಿಯಿಂದ ಈ ತಾಲೂಕಿನ ಕೆಲವು ಕಡೆಗಳಲ್ಲಿ ಹಾನಿಗೊಳಗಾದ ಎಲ್ಲ ಕುರುಹುಗಳು ವರದಿಯಲ್ಲಿವೆ ಆದಾಗ್ಯೂ ಜಿಲ್ಲಾ ರಾಜಕಾರಣೀಗಳ ನಿರ್ಲಕ್ಷ್ಯ ದೋರಣೆಯಿಂದ ಈ ಜಿಲ್ಲೆ ಕೈಬಿಟ್ಟು ಹೋಗಿದೆ.
ಅದರ ಪರೀಶೀಲನೆ ನಡೆಸುವುದು ನಮ್ಮೆಲ್ಲರ ಹಕ್ಕೋತ್ತಾಯವಾಗಿದೆ. ಈ ಸದ್ಯ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮಾದರಿಯಲ್ಲಿ ವಿಜಯಪುರ ಜಿಲ್ಲೆಯನ್ನು ಸಹ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ನೀಡಬೇಕು. ಎನ್ನುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದು ನ್ಯಾಯಯುತವಾದದ್ದು ಎಂದರು.
ಫಾಲಕನ್ ಪಿಯು ಕಾಲೇಜಿನ ಪ್ರಾಧ್ಯಾಪಕ ರಾಜು ನದಾಫ ಮಾತನಾಡಿ, 2013ರಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಂವಿದಾನದ ವಿಶೇಷ ಸೌಲಭ್ಯ ಅಡಿಯಲ್ಲಿ ಹಿಂದೂಳಿದ ಪ್ರದೇಶಕ್ಕೆ ದೊರಕುವ ವಿಶೇಷ ಸ್ಥಾನಮಾನ 371 ಜೆ ಕಲಂ ಜಾರಿಗೆ ಬಂದಿತು. ಆದರೆ ಪಕ್ಕದ ಜಿಲ್ಲೆ ವಿಜಯಪುರ ಹೆಸರು ಬಿಟ್ಟುಹೋಯಿತು. ಕಲ್ಯಾಣ ಕರ್ನಾಟಕ ಸಮನಾಗಿ ವಿಜಯಪುರ ಜಿಲ್ಲೆಯು ಕೂಡ ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೌಗೋಳಿಕವಾಗಿ, ಪ್ರಾದೇಶಿಕವಾಗಿ,
ಹಿಂದುಳಿದ ಜಿಲ್ಲೆಯಾಗಿದೆ 371 ಜೆ ಅಡಿಯಲ್ಲಿ ಸಿಗುವ ಪ್ರಾದೇಶಿಕ ಮಿಸಲಾತಿಗಳು ವಿಜಯಪುರ ಜಿಲ್ಲೆಗೂ ವಿಸ್ತರಿಸಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಮಿತಿಯ ರಂಗನಾಥ ತೊರ್ೆ, ಗುರುರಾಜ ಪಡಶೆಟ್ಟಿ, ಶಂಕರ ಮಲ್ಲೇದ, ಪಂಡಿತ ಯಂಪೂರೆ, ಸಂಗಪ್ಪ ಬ್ಯಾಕೋಡ, ಪ್ರಶಾಂತ ಕುಲಕರ್ಣಿ, ದಾನಪ್ಪಗೌಡ ಚನಗೊಂಡ ವಕೀಲರು, ವಿಜಯಕುಮಾರ ಪತ್ತಾರ, ಶಾಮಸುಂದರ ಪೂಜಾರಿ, ಬಾಬು ವಾಲೀಕಾರ ಸೇರಿದಂತೆ ಹಲವರಿದ್ದರು.