ಹಾವೇರಿಯಲ್ಲಿ ನಾಳೆ ‘ಕರ್ನಾಟಕ ಕವಿಗಳ ಮಹಾಸಂಗಮ-2026’
ಹಾವೇರಿ 26: ಶರಣ ಸಂತರ ನಾಡು, ಯಾಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ಕನ್ನಡ ಸಾಹಿತ್ಯ, ಕಾವ್ಯ ಮತ್ತು ರಂಗಭೂಮಿ ಕ್ಷೇತ್ರದ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ನಾಟಕ ಬರಹಗಾರ ಕವಿಗಳ ಸಂಘ (ರಿ.), ಬೆಂಗಳೂರು ವತಿಯಿಂದ ಕರುನಾಡ ಕವಿಗಳ ಮಹಾಸಂಗಮ ಹಿ 2026 ದಿ, 27 ಶುಕ್ರವಾರ ನಗರದ ಗುರು ಭವನದಲ್ಲಿ ಬೆಳಿಗ್ಗೆ 10:30 ಘಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕನ್ನಡ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕವಿಗಳು, ಸಾಹಿತಿಗಳು, ನಾಟಕಕಾರರು ಹಾಗೂ ರಂಗಭೂಮಿ ಕಲಾವಿದರ ಸಮ್ಮುಖದಲ್ಲಿ ನಡೆಯಲಿರುವ ಈ ಮಹಾಸಂಗಮವು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಚೈತನ್ಯ ಮೂಡಿಸುವ ನೀರೀಕ್ಷೆ ಹೊಂದಿದೆ.ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ರಂಗಭೂಮಿಯಲ್ಲಿ ತಮ್ಮ ಅಮೂಲ್ಯ ಕಲಾಸೇವೆ, ಅಭಿನಯ ಪ್ರತಿಭೆ ಹಾಗೂ ಸಾಧನೆಯ ಮೂಲಕ ಗುರುತಿಸಿಕೊಂಡಿರುವ ಮಹಿಳಾ ರಂಗಕಲಾವಿದೆಯರಿಗೆ ರಂಗ ನಕ್ಷತ್ರ ಪ್ರಶಸ್ತಿ 2026 ನೀಡಿ ಗೌರವಿಸಲಾಗುವುದು.ನಗರದ ಹುಕ್ಕೇರಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಕವಿಗಳ ಕಾವ್ಯವಾಣಿ, ನಾಟಕಕಾರರ ಸೃಜನಶೀಲತೆ, ಕಲಾವಿದರ ಕಲಾಪ್ರತಿಭೆ ಹಾಗೂ ಸಾಹಿತ್ಯಾಸಕ್ತರ ಸಮ್ಮಿಲನದ ಮೂಲಕ ಕನ್ನಡ ಭಾಷೆ, ಸಾಹಿತ್ಯ ಮತ್ತು ರಂಗಭೂಮಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಈ ಮಹಾಸಂಗಮದ ಪ್ರಮುಖ ಆಶಯವಾಗಿದೆ.ಕವಿಗಳನ್ನು ಗುರುತಿಸಿ ಗೌರವಿಸುವುದು, ರಂಗಭೂಮಿಯ ಸಾಧಕರಿಗೆ ಪ್ರೋತ್ಸಾಹ ನೀಡುವುದು ಹಾಗೂ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈ ಐತಿಹಾಸಿಕ ಪ್ರಯತ್ನವು ಹಾವೇರಿ ಜಿಲ್ಲೆಯಲ್ಲಿ ನಾಟಕ ಬರಗಾರರ ಸಾಂಸ್ಕೃತಿಕ ಇತಿಹಾಸದಲ್ಲಿ ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿ ಬರಲಿದೆ ಎಂದರು ಆಯೋಜಕರು ಪ್ರಕಟಣೆ ತಿಳಿಸಿದ್ದಾರೆ.