ಗದಗ

ಕಳಸಾಪೂರ ಕೆ.ಹೆಚ್‌.ಬಿ ಬಡಾವಣೆಯ ನಿವೇಶನಧಾರ ಫಲಾನುಭವಿಗಳಿಂದ ಶಾಸಕ ಎಚ್ ಕೆ ಪಾಟೀಲರಿಗೆ ಮನವಿ

ಕಳಸಾಪೂರ ಕೆ.ಹೆಚ್‌.ಬಿ  ಬಡಾವಣೆಯ ನಿವೇಶನಧಾರ ಫಲಾನುಭವಿಗಳಿಂದ ಶಾಸಕ ಎಚ್ ಕೆ ಪಾಟೀಲರಿಗೆ ಮನವಿ

ಲೋಕದರ್ಶನ ವರದಿ 

             ಗದಗ 26: ಕಳೆದ ಎರಡು ದಶಕಗಳ ಹಿಂದೆ ಕರ್ನಾಟಕ ಗ್ರಹ ಮಂಡಳಿ ( ಕೆ ಎಚ್ ಬಿ ) ಯಿಂದ ಮುಳಗುಂದ ರಸ್ತೆಯ ಕಳಸಾಪೂರ ಮಲ್ಲಸಮುದ್ರಕ್ಕೆ ಹೊಂದಿಕೊಂಡಿರುವ ಕಳಸಾಪೂರ ಕೆ. ಹೆಚ್‌. ಬಿ ಬಡಾವಣೆಯಲ್ಲಿ ಮಂಡಳಿಯಿಂದ ನಿವೇಶನ ಪಡೆದು ದಶಕಗಳೇ ಕಳೆದರೂ ನಿವೇಶನಧಾರ ಫಲಾನುಭವಿಗಳಿಗೆ ತಮ್ಮದೇಯಾದ ನಿವೇಶನಗಳಲ್ಲಿ ಸ್ವಂತ ಮನೆಯನ್ನು ನಿರ್ಮಾಣ ಮಾಡಲಾರದಂತಹ ದುಃಸ್ಥಿತಿಯಲ್ಲಿ ಕಾಲ ಕಳೆಯುವಂತಾಗಿದೆ. 

              ಇದಕ್ಕೆಲ್ಲಾ ಮೂಲ ಕಾರಣವಾಗಿ ಈ ಬಡಾವಣೆಯಲ್ಲಿ ಮನುಷ್ಯನ ಜೀವಿತಕ್ಕೆ ಅತ್ಯಂತ ಮೂಲಭೂತ ಸೌಕರ್ಯವಾದ ನೀರಿನ ಕೊರತೆಯಾಗಿದೆ. ಗದಗ ಬೆಟಗೇರಿ ನಗರಸಭೆ, ನಗರಾಭಿವೃದ್ಧಿ ಕೋಶ, ಹಾಗೂ ಜಿಲ್ಲಾಡಳಿತದಿಂದ ಕಳೆದ ಎರಡು ದಶಕಗಳಿಂದಲೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲತೆಯೇ ಮೂಲ ಕಾರಣವಾಗಿರುತ್ತದೆ. 

                 ಇದರಿಂದ ಬಡಾವಣೆಯ ಸುತ್ತಮುತ್ತಲಿನ ಪ್ರದೇಶಗಳೆಲ್ಲವೂ ಸಂಪೂರ್ಣ ಅಭಿವೃದ್ಧಿ ಹೊಂದಿ ಬ್ರಹತ್ ಬಡಾವಣೆಗಳಾಗಿ ಮಾರ​‍್ಪಟಟರೂ ಕೂಡಾ ಕಳಸಾಪೂರ ಕೆ ಎಚ್ ಬಿ ಬಡಾವಣೆ ಮಾತ್ರ ಜಿಲ್ಲಾಡಳಿತ, ಹಾಗೂ ಗದಗ ಬೆಟಗೇರಿ ನಗರಸಭೆಯ ಸಂಪೂರ್ಣ ನಿರ್ಲಕ್ಷತೆಯಿಂದ ಬರಡು ಭೂಮಿಯಂತೆ ನಗರದ ಸುಂದರತೆಗೆ ಮಾರಕವಾಗಿ ಕಂಗೋಳಿಸುತ್ತಿದೆ. 

              ಈ ಒಂದು ಬಡಾವಣೆಯಲ್ಲಿ ನಿವೇಶನ ಹೊಂದಿರುವ ನಾಗರಿಕರು ಮಾತ್ರ ತಮ್ಮ ಯವ್ವನಾಸ್ಥೆಯಲ್ಲಿ ತಮ್ಮದೇಯಾದ ಸ್ವಂತ  ನಿವೇಶನದಲ್ಲಿ ಸುಂದರ ಮನೆಯ ನಿರ್ಮಾಣದ ಕನಸನ್ನು ಹೊಂದಿ ನಿವೇಶನ ಪಡೆದು ಈಗಾಗಲೇ ಈಗಾಗಲೇ ಮುಪ್ಪಾವಸ್ಥೆಯಲ್ಲಿ ಬಂದರೂ ತಮ್ಮ ಸ್ವಂತ ಮನೆಯ ಹಗಲುಗನಸು ಮಾತ್ರ ಕನಸಿನಲ್ಲಿಯೇ ಮರೀಚಿಕೆಯಾಗಿರುತ್ತದೆ. 


ಸುದ್ದಿ ಓದಿ