ಕಾಗವಾಡ

ತಾಲೂಕಿನಾದ್ಯಂತ ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ನಿಮಿತ್ಯ ಸೇವಾ ದಿನಾಚರಣೆ; ವಿಶೇಷ ಪೂಜೆ; ರೋಗಿಗಳಿಗೆ ಹಣ್ಣು ವಿತರಣೆ

ತಾಲೂಕಿನಾದ್ಯಂತ ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ನಿಮಿತ್ಯ ಸೇವಾ ದಿನಾಚರಣೆ; ವಿಶೇಷ ಪೂಜೆ; ರೋಗಿಗಳಿಗೆ ಹಣ್ಣು ವಿತರಣೆ
'Seva Dina' (Day of Service) observed across the taluk to mark Dr. Veerendra Heggade’s birthday; spe

ಲೋಕದರ್ಶನ ವರದಿ 

             ಕಾಗವಾಡ 26: ತಾಲೂಕಿನಾದ್ಯಂತ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸೇವಾ ದಿನಾಚರಣೆಯ ಅಂಗವಾಗಿ ಬುಧವಾರ ದಿ. 25 ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾಗವಾಡ ಯೋಜನಾ ಕಚೇರಿ ವ್ಯಾಪ್ತಿಯ ವತಿಯಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಮತ್ತು ಶಿರಗುಪ್ಪಿಯ ವೃದ್ಧಾಶ್ರಮದ ವೃದ್ಧರಿಗೆ ಹಣ್ಣು ವಿತರಿಸಿ,

            ಐನಾಪೂರ ಸಿದ್ದೇಶ್ವರ, ಉಗಾರ ಖುರ್ದದ ಲಕ್ಷ್ಮೀದೇವಿ, ಉಗಾರ ಬುದ್ರಕ್‌ನ ಪದ್ಮಾವತಿ, ಮಂಗಸೂಳಿ ಮಲ್ಲಯ್ಯ, ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಗಣ್ಯರು ಸೇರಿ ವಿಷೇಶ ಪೂಜೆ ನೆರವೇರಿಸಿ, ಡಾ. ವೀರೇಂದ್ರ ಹೆಗ್ಗಡೆಯವರಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. 

               ಈ ಸಂದರ್ಭದಲ್ಲಿ ಶಿರಗುಪ್ಪಿ ಜೆಸಿಎಲ್ ಸಹಕಾರಿಯ ಅಧ್ಯಕ್ಷ ಭಮಣ್ಣಾ ಚೌಗುಲೆ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆಯವರು ಸಮಾಜದ ಶಕ್ತಿಯಾಗಿ ನಿಂತು ಬಡವರು, ದುರ್ಬಲರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಭಿವೃದ್ಧಿಗಾಗಿ ಅನೇಕ ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸಿ ಇಂತಹ ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮೆಲ್ಲರ ಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು. 

              ಈ ವೇಳೆ ಐನಾಪೂರ ಪ.ಪಂ. ಸದಸ್ಯ ಅರುಣ ಗಾಣಿಗೇರ, ಜೆ ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ಸ್ವಪ್ನಿಲ್ ಪಾಟೀಲ, ಉಗಾರ ಬುದ್ರುಕ್ ಗ್ರಾಮದ ಮುಖಂಡ ವ್ರಷಬ್ ಪಾಟೀಲ, ಪ್ರಕಾಶ ಕೋರಬು, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಕುಮಾರ ಗಾಣಿಗೇರ ಉಗಾರ ಖುದ್ರ ಪುರಸಭೆ ಸದಸ್ಯ ಯೋಗೀಶ ಕುಂಬಾರ, ಯೋಜನಾಧಿಕಾರಿ ಸಂಜೀವ ಮರಾಠಿ, ಕೃಷಿ ಮೇಲ್ವಿಚಾರಕ ಶಿವು ಶಿಪರಮಟ್ಟಿ, ಸೇರಿದಂತೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು, ಒಕ್ಕೂಟದ ಪದಾಧಿಕಾರಿಗಳ, ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ