ಗುರುದೇವ ಬಯೋರಿಪೈನರಿಸ್ ಕಾರ್ಖಾನೆಯ ಭೂಮಿ ಪೂಜೆ
ಇಂಡಿ 14: ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಇದೆ ದಿ.14ರಂದು ಬುಧುವಾರ ದಿವಸ ಬೆಳಿಗ್ಗೆ 10ಗಂಟೆಗೆ ಗುರುದೇವ ಬಯೋರಿಪೈನರಿಸ್ ್ಘ ಅಲೈಡ್ ಇಂಡಸ್ಟ್ರೀಸ್ ಭೂಮಿ ಪೂಜೆ ಕಾರ್ಯಕ್ರಮವನ್ನು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಗುರು ಪೀಠದ ಬಸವ ಮೃತ್ಯುಂಜಯ ಪೂಜ್ಯರ ಅಮೃತ ಹಸ್ತದಿಂದ ನೆರವೆರಿತು.ನಂತರ ಆರ್ಶಿವಚನ ನೀಡಿ ಮಾತನಾಡಿದ ಪೂಜ್ಯರು ರೈತರು ದೇಶದ ಬೆನ್ನೆಲುಬು ದೇಶದಲ್ಲಿ ಮತ್ತು ರಾಜ್ಯದಲ್ಲಿ ಇಥೆನಾಲ್ ಉತ್ಪಾದನೆ ಅತಿ ಅವಶ್ಯಕವಾಗಿದೆ. ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಅತ್ಯಂತ ದೊಡ್ಡ ಸಕ್ಕರೆ ಕಾರ್ಖಾನೆ ಆಗಿರುವುದರಿಂದ ಈ ಬಾಗದ ಕಬ್ಬು ಬೆಳೆಯುವ ರೈತರಿಗೆ ಹಾಗೂ ಯುವಕರಿಗೆ ತುಂಬಾ. ಅನುಕೂಲವಾಗಲಿದೆ ಹೇಳಿದರು. ಭೂಮಿ ಪೂಜೆ ಅಡಿಗಲ್ಲು ಕಾರ್ಯಕ್ರಮವನ್ನು ವಿಜಯಪೂರ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ಅವರು ನೆರವೇರಿಸಿದರು ಮಾತನಾಡಿದ ಅವರು ನಾನು ರಾಜಕೀಯ ಬೆಳೆಯಲು ನನಗೆ ಇಂಡಿ ತಾಲ್ಲೂಕಿನ ಕೊಡಿಗೆ ಅಪಾರವಾದದ್ದು.ನನ್ನಂತ ದಲಿತ ಮನುಷ್ಯನ್ನು ರಾಜಕೀಯಕ್ಕೆ ತಂದು ರಾಜ್ಯದ ವಿವಿಧ ಸಚಿವ ಸ್ಥಾನ ಹಾಗೂ ಕೇಂದ್ರದಲ್ಲಿ ಸಚಿವ ಸ್ಥಾನ ಸೇರಿದಂತೆ ಅನೇಕ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದ್ದು ಜನರಿಂದ ಎಂದ ಅವರು ನನಗೂ ಹಾಗೂ ತಡವಲಗಾ ಗ್ರಾಮಕ್ಕೆ ಅನುನ್ಯವಾದ ಸಂಬಂಧ ವಿದೆ.ತಡವಲಗಾ ಗ್ರಾಮದಲ್ಲಿ ಗುರುದೇವ ಬೈಯೋರೈ ಸಕ್ಕರೆ ಕಾರ್ಖಾನೆ ಆಗುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಭಾಗದ ರೈತರ ಬಹುಮುಖ್ಯ ಬೇಡಿಕೆ ಸ್ಪಂದಿಸಿ ಇಂಡಿ ತಾಲ್ಲೂಕಿನ ಅಥರ್ಗಾ ತಡವಲಗಾ ಹಂಜಗಿ ನಿಂಬಾಳ ಕೆರೆಗಳನ್ನು ತುಂಬಿಸುವಲ್ಲಿ ನಾನು ಯಶಸ್ವಿಯಾಗಿದ್ದೆನೆ ಹಾಗೂ ಇಂಡಿ ಮಾರ್ಗವಾಗಿ ಅಕ್ಕಲಕೋಟ ಹಾಗೂ ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ವಿಧಾನಪರಿಷತ್ ಸದಸ್ಯರಾದ ಅರುಣ ಶಾಹಪೂರ ಮಾತನಾಡಿ ಕಬ್ಬು ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಕಬ್ಬು ಹಾಗೂ ಇಥನಾಲ್ ಎರಡನೇ ಅತಿದೊಡ್ಡ ಸಂಘಟಿತ ಕೃಷಿ ಉದ್ಯಮವಾಗಿ ತನ್ನನ್ನು ಉಳಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಂಡಿ ಮತಕ್ಷೇತ್ರದ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರ ಪುತ್ರ ವಿಠ್ಠಲಗೌಡ ಪಾಟೀಲ ಅವರು ಮಾತನಾಡಿ ಸಾಮಾನ್ಯವಾಗಿ ಕಬ್ಬಿನ ಕೃಷಿಯ ಅನನುಕೂಲತೆ ಮತ್ತು ನಿರ್ದಿಷ್ಟವಾಗಿ ಕಬ್ಬಿನ ರೈತರು ಸ್ಥಿರತೆ ಮತ್ತು ಸುಸ್ಥಿರತೆಯ ಅಗತ್ಯಕ್ಕೆ ಕರೆ ನೀಡುತ್ತಾರೆ. ಕಬ್ಬಿನ ರೈತರ ಆದಾಯದಲ್ಲಿ ಸುಸ್ಥಿರ ಬೆಳವಣಿಗೆಗೆ, ಕಬ್ಬಿನ ಆದಾಯದ ಬೆಳವಣಿಗೆಗೆ ಹೋಲಿಸಿದರೆ ಸಕ್ಕರೆ ಮತ್ತು ಉತ್ಪನ್ನಗಳ ಮೂಲಕ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸುವುದು ಅತ್ಯಗತ್ಯ. ಉತ್ಪನ್ನಗಳ ಮೂಲಕ ಕಬ್ಬಿನ ಬೇಡಿಕೆಗಳನ್ನು ಮತ್ತು ಸಕ್ಕರೆ ಉದ್ಯಮಕ್ಕೆ ಲಾಭದಾಯಕ ಮತ್ತು ನಿರಂತರ ಆದಾಯಕ್ಕಾಗಿ ಅವುಗಳ ಪರಿಣಾಮಕಾರಿ ಬಳಕೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಗುರುದೇವ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಆನಂದ ಬಿರಾದಾರ ಮಾತನಾಡಿ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಸುಮಾರು 487 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಕ್ಕರೆ ಕಾರ್ಖಾನೆ ಕಾಮಗಾರಿ ಕೈಗೆ ಎತ್ತಿಕೊಳ್ಳಲಾಗುತ್ತಿದೆ.ಈ ಸಕ್ಕರೆ ಕಾರ್ಖಾನೆ ಕಟ್ಟಡ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಿಸುವ ಗುರಿ ಹೊಂದಲಾಗಿದೆ,ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಡವಲಗಾ ಹೀರೆಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಗುರುಪೀಠದ ಮಾದರ ಚೆನ್ನಯ್ಯ ಪೂಜ್ಯರು, ಹಾಗೂ ಗುರುದೇವ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷರಾದ ಹಣಮಂತ ಗಿರಡ್ಡಿ, ಮಹೇಂದ್ರ ಓಸ್ವಾಲ್, ಗುರುದೇವ ಸಕ್ಕರೆ ಎಮ್ ಡಿ ಸಾಬು ದೊಡ್ಡಮನಿ, ಹಾಗೂ ವೆಂಕಟೇಶ್ ಜಿ, ಶ್ರೀನಿವಾಸ ಜಿ, ಸೇರಿದಂತೆ ಅನೇಕರು ಮಾತನಾಡಿದರು ಈ ಸಂದರ್ಭದಲ್ಲಿ ಎಸ್ ಎಸ್ ಪಾಟೀಲ, ಇಂಡಿ ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷರಾದ ವಿ ಎಚ್ ಬಿರಾದಾರ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಂದಾ ವಾಲಿಕಾರ ರವಿ ಹೊಸಮನಿ, ಚಂದ್ರಶೇಖರ ರೂಗಿ, ತಮ್ಮಣ್ಣ ಪೂಜಾರಿ,ಲಕ್ಷಣ್ಣಾ ಆಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.