ಬಂಜಾರಾ ಸಮುದಾಯ ಶ್ರಮಿಕ ಸಮುದಾಯವಾಗಿದೆ: ಬಿರಾದಾರ
ಇಂಡಿ: ಬಂಜಾರಾ ಸಮಾಜ ಬಾಂಧವರು ಶೈಕ್ಷಣಿಕವಾಗಿ ಮುಂದೆ ಬರಬೇಕು. ಬಂಜಾರಾ ಸಮುದಾಯ ಶ್ರಮಿಕ ಸಮುದಾಯವಾಗಿದೆ. ಕಾಯಕದಲ್ಲೇ ದೇವರನ್ನು ಕಂಡ ಸಮಾಜ ಬಂಜಾರ ಸಮಾಜವಾಗಿದೆ ಎಂದು ಕಾಸುಗೌಡ ಬಿರಾದಾರ ಹೇಳಿದರು.
ಪಟ್ಟಣದ ದೇಶಪಾಂಡೆ ತಾಂಡಾದಲ್ಲಿ ಬಸವಲಾಲ ದೇವಸ್ಥಾನ ಉದ್ಘಾಟನೆ ಮತ್ತು ಕಳಸಾರೋಹಣ ಕಾರ‌್ಯಕ್ರಮವನ್ನು ಬಿಜೆಪಿ ರೈತಮೋರ್ಚಾ ಜಿಲಾ ್ಲಅಧ್ಯಕ್ಷ ಕಾಸುಗೌಡ ಬಿರಾದಾರ ಮಂಗಳವಾರ ಲೋಕಾರೆ್ಣಗೊಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಮಾತನಾಡಿ, ಬಂಜಾರಾ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ಅಭಿವೃಧ್ಧಿ ಕುಂಠಿತಕ್ಕೆ ಕಾರಣವಾಗಿದೆ. ಸರಕಾರಗಳು ಬಂಜಾರಾ ಸಮಾಜಕ್ಕೆ ನೆರವು ನೀಡಲು ಮುಂದಾಗಬೇಕಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ವಿಜಯಕುಮಾರ ರಾಠೋಡ, ಯಲ್ಲಪ್ಪ ಹದರಿ ಮಾತನಾಡಿದರು.
ಹಡಲಸಂಗದ ಪ್ರಕಾಶ ಮಹಾರಾಜರು ಆಶೀರ್ವಚನ ನೀಡಿದರು.
ವಿಜಯಕುಮಾರ ರಾಠೋಡ, ಭೀಮುಶೇಟ್ ರಾಠೋಡ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಭೀಮಸಿಂಗ ರಾಠೋಡ, ಸಂಜು ಚವ್ಹಾಣ, ಗೋವಿಂದ ರಾಠೋಡ, ಮಲ್ಲು ವಾಲೀಕಾರ, ಸೋಮು ರಾಠೋಡ, ದಶರಥ ರಾಠೋಡ, ಸೋಮು ಚವ್ಹಾಣ, ವಿಶ್ವನಾಥ ಚವ್ಹಾಣ, ರಮೇಶ ರಾಠೋಡ, ದತ್ತಾ ಬಂಡೇನವರ್ ಮತ್ತಿತರರು ಇದ್ದರು.