ಇಂಡಿ

ಬಿಜೆಪಿ ಮುಖಂಡರು ನನ್ನನ್ನು ಅಪಹರಣ ಮಾಡಿಲ್ಲ: ಭೀಮನಗೌಡ

ಬಿಜೆಪಿ ಮುಖಂಡರು ನನ್ನನ್ನು ಅಪಹರಣ ಮಾಡಿಲ್ಲ: ಭೀಮನಗೌಡ

ಇಂಡಿ: ಬಿಜೆಪಿ ಮುಖಂಡರು ನನ್ನನ್ನು ಅಪಹರಣ ಮಾಡಿಲ್ಲ. ನಾನು ಡಿ.ಆರ್‌. ಶಹಾ ಅವರ ಮನೆಯಲ್ಲಿದ್ದಾಗ ನನ್ನ ಹತ್ತಿರ ಬಂದು ಕೈಕಾಲು ಹಿಡಿದು ಕರೆದುಕೊಂಡು ಬಂದಿದ್ದಾರೆ ಎಂದು ಪುರಸಭೆ ಸದಸ್ಯ ಭೀಮನಗೌಡ (ಬಲುಗೌಡ) ಪಾಟೀಲ ಹೇಳಿದರು. 

ಅವರು ಗುರುವಾರ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ನನ್ನ ಎದೆ ಮೇಲಿನ ಅಂಗಿ ಹಿಡಿದುಕೊಂಡು ಹೋಗಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ.ನನ್ನನ್ನು ಮುಟ್ಟುವಷ್ಟು ಧೈರ್ಯ ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಅನೀಲ ಜಮಾದಾರ, ಕಾಸುಗೌಡ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಮತ್ತಿತರರು ಇದ್ದರು.

ಸುದ್ದಿ ಓದಿ