ಮಹಿಳಾ ವಿಶ್ವವಿದ್ಯಾಲಯ ಬೆಸ್ಟ್ ಅಥ್ಲೆಟಿ ಮಮತಾ ಪೂಜರಾಪುರ್ ಆಯ್ಕೆ
ರಾಣೆಬೆನ್ನೂರು : ಪ್ರತಿಷ್ಠಿತ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಮಮತಾ ಪೋರಾಪುರ್ ಅವರು ವಿಜಯಪುರ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ 200 ಮೀಟರ್ ಹಾಗೂ 400 ಮೀಟರ್ ರನ್ನಿಂಗ್ ನಲ್ಲಿ ಪ್ರಥಮ ಸ್ಥಾನ ಗಳಿಸಿ ಮಹಿಳಾ ವಿಶ್ವವಿದ್ಯಾನಿಲಯದ ಬೆಸ್ಟ್ ಅಥ್ಲೆಟಿ ಯಾಗಿ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅದೇ ರೀತಿ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಿಯಾಂಕಾ ಅಸುಂಡಿ ಅವರು800, ಮೀ. ನಲ್ಲಿ ತೃತೀಯ ಸ್ಥಾನ, ಮತ್ತು ಮಮತಾ ಪರಾಪುರ್, ಶೃತಿ ಮುದಿಗೌಡ್ರ, ಅಂಜಲಿ ಜಾದವ, ತಸ್ಲೀಂ ಬಾವಿಕಟ್ಟಿ 4*100 ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕ್ರೀಡಾ ಸಾಧಕ ವಿದ್ಯಾರ್ಥಿ ಗಳಿಗೆ, ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವ್ಹಿ. ಪಿ. ಲಿಂಗನಗೌಡ್ರ, ಸದಸ್ಯರಾದ, ಬಸವರಾಜ ಪಟ್ಟಣಶೆಟ್ಟಿ ವೀರಣ್ಣ ಅಂಗಡಿ, ಪ್ರಾಚಾರ್ಯ ನಾರಾಯಣ ನಾಯಕ್ ಎ, ಕ್ರೀಡಾ ನಿರ್ದೇಶಕ ಸಿ.ಎಸ್.ಮಂಜಪ್ಪ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಪ್ರಾಧ್ಯಾಪಕರು, ಸಿಬ್ಬಂದಿ ಮತ್ತಿತರ ಗಣ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರ