ಮಲ್ಲೇಶ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಹಸೀಲ್ದಾರಗೆ ಮನವಿ
ಇಂಡಿ: ಬ್ರಾಹ್ಮಣ ಮತ್ತು ಬ್ರಾಹ್ಮಣಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದ ಸಭೆಯಲ್ಲಿ ಸಾರ್ವಜನಿಕವಾಗಿ ಮತ್ತು ಆಕ್ಷೇಪ ಮತ್ತು ಆಶ್ಲೀಲವಾಗಿ ಮಾತನಾಡಿರುವ ಪ್ರಗತಿಪರ ಚಿಂತಕ ಪ. ಮಲ್ಲೇಶ ವಿರುದ್ಧ ಕ್ರಮ ಕೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಇಂಡಿ ತಾಲೂಕಿನ ಬ್ರಾಹ್ಮಣ ಸಮುದಾಯದ ಬಾಂಧವರು ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ ವಿರುಪಾಕ್ಷಯ್ಯ ಬಣಗಾರ ಅವರಿಗೆ ಮನವಿ ಸಲ್ಲಿಸಿದರು.
ನ್ಯಾಯವಾದಿ ಸತೀಶ ಕುಲಕರ್ಣಿ ಮಾತನಾಡಿ, ಪ.ಮಲ್ಲೇಶರವರು ವೇದ ಮತ್ತು ಉಪನಿಷತ್ತುಗಳ ಬಗ್ಗೆ ಕೆಟ್ಟ ಅಭಿರುಚಿಯಿಂದ ಲಘುವಾಗಿ ಮಾತನಾಡಿದ್ದಾರೆ. ಮಠಾಧೀಶರನ್ನು ಕೂಡ ಅವಹೇಳನ ಮಾಡಿರುವ ಅವರ ವಿರುದ್ಧ ಕ್ರಮ ಕೈ ಕೊಳ್ಳುವಂತೆ ಕಂದಾಯ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಕೃಷ್ಣಾ ಆದ್ಯ ಮಾತನಾಡಿ, ಪ. ಮಲ್ಲೇಶ ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ ಇವರಿಂದ ದೇಶ ನಾಶವಾಗುತ್ತಿದೆ ಎಂದು ತನ್ನ ನಾಲಿಗೆ ಹರಿಯ ಬಿಟ್ಟಿದ್ದು, ಈ ವಿವಾದಿತ ಹೇಳಿಕೆಯಿಂದ ಸಮಸ್ತ ಬ್ರಾಹ್ಮಣ ಸಮುದಾಯಕ್ಕೆ ನೋವು ಉಂಟಾಗಿದೆ. ಆದ್ದರಿಂದ ಆತನ ಹೇಳಿಕೆ ಖಂಡಿಸಿ ಅವರ ಮೇಲೆ ಕ್ರಮ ಕೈಕೊಳ್ಳುವಂತೆ ಸರಕಾರಕ್ಕೆ ಆಗ್ರಹಿಸಿದರು.
ಭೀಮನಗೌಡ ಬಿರಾದಾರ ಹಿರೆಬೇವನೂರ ಮಾತನಾಡಿದರು.
ಪ್ರತಿಭಟನೆಯಲ್ಲಿ ವೇಂಕಟೇಶ ಕುಲಕರ್ಣಿ, ಜಿ.ಎಸ್. ಜೋಶಿ ವಕೀಲರು, ಎ.ಆರ್. ಕುಲಕರ್ಣಿ ವಕೀಲರು, ಅಶೋಕ ಕುಲಕರ್ಣಿ ವಕೀಲರು, ಎನ್.ಕೆ. ನಾಡಪುರೋಹಿತ, ಪ್ರಸನ್ನ ದೇಶಪಾಂಡೆ, ಜಗಧೀಶ ಪಾಟೀಲ ವಕೀಲರು, ಆನಂದ ಕುಲಕರ್ಣಿ, ಎಸ್.ಬಿ.ಕುಲಕರ್ಣಿ, ಕೃಷ್ಣ ಚಟ್ಟರಕಿ, ರವೀಂದ್ರ ಕುಲಕರ್ಣಿ, ಭೀಮ ಕುಲಕರ್ಣಿ, ರಾಘು ಹಳ್ಳಿ, ಅನೀಲ ಶೇಖದಾರ, ಶ್ರೀನಿವಾಸ ದೇಶಪಾಂಡೆ, ಶಿವ ಚದಂಬರ ಕುಲಕರ್ಣಿ, ದತ್ತಾ ಕುಲಕರ್ಣಿ, ಪಿ.ಜಿ. ನಾಡಗೌಡ, ಕೃಷ್ಣ ಕುಲಕರ್ಣಿ, ಸಂಕೇತ ಜೋಶಿ, ಆನಂದ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.