ಡೆಂಗೀ ವಿರೋಧಿ ಮಾಸಾಚರಣೆ ಕಾರ್ಯಕ್ರಮ
ಇಂಡಿ: ನಿರುಪಯುಕ್ತ ಗಣ ತ್ಯಾಜ್ಯ ವಸ್ತುಗಳು ಬೇಕಾಬಿಟ್ಟಿಯಾಗಿ ಎಸೆದಿರುವ ಟೈಯರು ಪ್ಲಾಸ್ಟಿಕ್ ವಸ್ತುಗಳಲ್ಲಿ ನಿರುಪಯುಕ್ತ ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳ ತವರಾಗದಂತೆ ನೋಡಿಕೊಳ್ಳಿ ಡಾ. ಪ್ರಶಾಂತ ಧೂಮಗೊಂಡ ಎಂದು ಹೇಳಿದರು.
ಶನಿವಾರ ತಾಲೂಕಿನ ಸಾಲೋಟಗಿ ಗ್ರಾಮದ ಶಿವಯೋಗೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಡೆಂಗೀ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಳೆಗಾಲ ಅವಧಿಯಲ್ಲಿ ಜನಸಾಮಾನ್ಯರಿಗೆ ವಾಂತಿಭೇದಿ ಹಲವು ಪ್ರರಣಗಳು ಕಂಡು ಬರುತ್ತಿದ್ದು. ಗ್ರಾಮಸ್ಥರು ಕಲುಷಿತ ನೀರು, ವಿಷಪೂರಿತ ಆಹಾರ ಸೇವನೆಯಿಂದ ಡೆಂಗ್ಯೂ ಬರುವ ಲಕ್ಷಣಗಳು ಕಂಡು ಬಂದರೆ ಕಾಯಿಸಿದ ನೀರು ಕುಡಿಯಬೇಕು. ಬಿಸಿ-ಬಿಸಿ ಆಹಾರ ಊಟಮಾಡಬೇಕು. ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ತಾಲೂಕಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಮ್. ಪೂಜಾರಿ ಮಾತನಾಡಿ, ಗ್ರಾಮದ ನಿವಾಸಿಗಳು ಆರೋಗ್ಯ ಇಲಾಖೆಯ ನಿಯಮ ಪಾಲಿಸಿ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ರೋಗದಂತೆ ಕಾಯಿಲೆಗಳು ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಚಿಕನ್ ಗುನ್ಯಾ, ಮಲೇರಿಯಾ ಹಾಗೂ ಡೆಂಗ್ಯೂ ಎಲ್ಲವೂ ಸೊಳ್ಳೆಗಳಿಂದ ಮನುಷ್ಯನಿಗೆ ಹರಡುವುದು. ಈ ಮೂರು ಜ್ವರಗಳು ಭಿನ್ನ ವೈರಸ್ ಹಾಗೂ ಸೊಳ್ಳೆಗಳಿಂದ ಬರುವುದು. ಆದರೆ ಎಲ್ಲಾ ಮೂರು ಜ್ವರಗಳ ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯಾಗಿ ಇರುವುದು ಇದರಿಂದ ತಾವುಗಳು ಮಳೆಗಾಲದಲ್ಲಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛೆತೆಯಿಂದ ಇರಿಸಿ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಅಧಿಕಾರಿ ಎಸ್.ಹೆಚ್. ಆತನೂರ, ಎಸ್.ಬಿ. ಡಾಣೆ, ಪಿ.ಬಿ. ಹ್ಯಾಳಾದ, ಜೆ.ಎಂ. ಕಡಣಿ. ಬಿ.ಕೆ. ಪಾಟೀಲ, ಆರ್.ಎನ್. ನಿಂಬಾಳ, ಕೂಸುರ್, ಜಗದೇವಿ ಮಂದೇವಾಲ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.