ಆಂಜನೇಯ ಸ್ವಾಮಿ ಭವ್ಯ ಮೆರವಣಿಗೆ
ಲೋಕದರ್ಶನ ವರದಿ
ಯರಗಟ್ಟಿ 12: ನೂರಾರು ಯುವಕರು ಪ್ರತಿ ವರ್ಷದಂತೆ ಹನುಮ ಮಾಲಾಧರಣೆ ಧರಿಸಿ ಹಲವು ದಿನ ವೃತ ಪಾಲಿಸಿ ತುಂಬಿದ ಕೆರೆಯ ಮೇಲಿನ ಆಂಜನೇಯ ದೇವಸ್ಥಾನದಿಂದ ಹನುಮ ದೇವರ ಪಲ್ಲಕ್ಕಿ ಉತ್ಸವ ಹಾಗೂ ಹನುಮ ಮೂರ್ತಿಯೊಂದಿಗೆ ವಿವಿಧ ವಾಧ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಸಂಚರಿಸಿತು. ಸಂಜೆ ಮಹಾಪ್ರಸಾದ ಜರುಗಿತು.
ಮೆರವಣಿಗೆಯಲ್ಲಿ ವಿಧಾನ ಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ತಾ.ಪಂ.ಅಧ್ಯಕ್ಷ ವಿನಯಕುಮಾರ ದೇಸಾಯಿ, ವೆಂಕಟೇಶ ದೇವರಡ್ಡಿ, ಸದಾನಂದ ಪಾಟೀಲ, ರಮೇಶ ಮುದ್ದನ್ನವರ, ಶಿವುಕುಮಾರ ಜಕಾತಿ, ಹನುಮ ಮಾಲಾಧಾರಿಗಳಾದ ಈರಣ್ಣ, ವಿನಾಯಕ, ಸಚಿನ, ಸಂತೋಷ, ಪ್ರಕಾಶ, ಶಿವನಾಯ್ಕ, ರವಿ, ಚಂದು, ಬಸುರಾಜ, ಲಿಂಗರಾಜ, ವೆಂಕಟೇಶ, ಹನುಮಂತ, ವಿಜಯ, ಪ್ರಶಾಂತ, ಅರುಣ, ಕಾರ್ತಿಕ, ಸುದೀಪ, ಪ್ರವೀಣ, ಶಿವಾನಂದ, ಸುಭಾಷ, ವಿವೇಕ ಮುಂತಾದವರಿದ್ದರು.