ಬಬಲಾದ, ಚಡವಿಹಾಳ, ಅಂಜುಟಗಿ ಗ್ರಾ.ಪಂ ಗಳಿಗೆ ಅನಿತಾ ಬಿ.ಕೆ, ಜಗದೀಶ ಭೇಟಿ
ಇಂಡಿ: ತಾಲೂಕಿನ ಬಬಲಾದ, ಚಡವಿಹಾಳ ಮತ್ತು ಅಂಜುಟಗಿ ಗ್ರಾ.ಪಂ ಗಳಿಗೆ ಆಯುಕ್ತಾಲಯದ ನರೇಗಾದ ಸಹಾಯಕ ನಿದರ್ೇಶಕ ಕೆ.ಎಸ್. ಜಗದೀಶ ಮತ್ತು ಆಯುಕ್ತಾಲಯದ ಜಂಟಿ ನಿದರ್ೇಶಕ ಅನಿತಾ ಬಿ.ಕೆ. ಹಾಗೂ ಯುವ ವೃತ್ತಿಪರ ಜಗದೀಶ ಗುರುವಾರ ಭೇಟಿ ನೀಡಿದರು.
ಹಳಗುಣಕಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ, ಕಂಪೌಂಡ, ಬಾಸ್ಕೆಟ್ ಬಾಲ್ ಕ್ರೀಡಾಂಗಣ, ಅಡುಗೆ ಕೋಣೆ, ಅರಣ್ಯ ಇಲಾಖೆಯ ನರ್ಸರಿ, ಬಬಲಾದ ಗ್ರಾ.ಪಂ ನೂತನ ಕಟ್ಟಡ, ಚವಡಿಹಾಳ ಅಮೃತ ಗ್ರಾ.ಪಂ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಜಿ.ಪಂ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಇಓ ಸುನೀಲ ಮದ್ದಿನ, ನರೇಗಾ ಸಹಾಯಕ ನಿದರ್ೇಶಕ ಸಂಜೀವ ಖಡಗೇಕರ, ಉಪವಲಯ ಅರಣ್ಯ ಅಧಿಕಾರಿ ಎಲ್.ಜಿ. ನಾದ, ಸಂಜೀವಕುಮಾರ ಬಿರಾದಾರ, ಡಾ. ಜ್ಞಾನಜ್ಯೋತಿ ಚಾಂದಕವಟೆ, ಪಿಡಿಓಗಳಾದ ಸಿದ್ದರಾಮ ಬಿರಾದಾರ, ಸಿ.ಜಿ.ಪಾರೆ, ಎಸ್. ಶಿವಣಗಿ, ತಾಂತ್ರಿಕ ಸಹಾಯಕ ಶ್ರೀನಿವಾಸ ಪತಂಗೆ, ಅಣ್ಣಪ್ಪಗೌಡ ಬಿರಾದಾರ, ಬಿ.ಎಫ್.ಟಿ ಸಯ್ಯದ ಸೇರಿದಂತೆ ಅನೇಕ ತಾಲೂಕಾಧಿಕಾರಿಗಳು ಇದ್ದರು.